Friday, October 18, 2024

Latest Posts

ಅರಳಿ ಮರದ ಎಲೆಗಳ ರಸವನ್ನು ಬೆಳಗ್ಗೆ ಕುಡಿಯುವುದರಿಂದ ಆರೋಗ್ಯಕ್ಕೆ 5 ಅದ್ಭುತ ಪ್ರಯೋಜನಗಳಿವೆ

- Advertisement -

Health tips:

ಅರಳಿಮರದ ಎಲೆಗಳ ರಸವನ್ನು ಕುಡಿಯುವುದರಿಂದ  ಆರೋಗ್ಯಕ್ಕೆ ತುಂಬಾ ಪ್ರಯೋಜನವಾಗಲಿದ್ದು, ಇದರ ಎಲೆಗಳು ಅನೇಕ ಪೋಷಕಾಂಶಗಳಲ್ಲಿ ಸಮೃಧ್ದವಾಗಿದೆ.  ಇದು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅನೇಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟುಲು ಸಹಾಯ ಮಾಡುತ್ತದೆ. ಅರಳಿ ಮರದ ಎಲೆಗಳು ಕ್ಯಾಲ್ಸಿಯಂ., ಕಬ್ಬಿಣ, ಪ್ರೋಟೀನ್, ಫೈಬರ್, ಮ್ಯಾಂಗನೀಸ್, ತಾಮ್ರದಂತಹ ಖನಿಜಾಂಶಗಳನ್ನು ಹೊಂದಿದೆ.

ಅರಳಿಮರದ ಎಲೆಗಳ ಜ್ಯೂಸ್ ಸೇವಿಸುವದರಿಂದಾಗುವ ಪ್ರಯೋಜನಗಳು

  1. ಈ ಗಿಡದ ಎಲೆಗಳ ಜ್ಯೂಸ್ ಸೇವಿಸುವದರಿಂದ ಎದೆಯಲ್ಲಿ ಸಂಗ್ರಹವಾಗುವ ಕಫ ಮತ್ತು ಕೆಮ್ಮಿನ ಸಮಸ್ಯೆಯನ್ನು ನಿವಾರಿದುತ್ತದೆ.
  2. ಅಸ್ತಮಾ ಮತ್ತು ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವವರು ಇದರ ಜ್ಯೂಸ್ ಸೇವಿಸುವುದರಿಂದ ಶ್ವಾಸಕೋಶವನ್ನು ಸ್ವಚ್ಛ ಮಾಡಿ ಉಸಿರಾಟದ ತೊಂದರೆಯನ್ನು ತಡೆಯುತ್ತದೆ.
  3. ಅತಿಸಾರದ ಸಂದರ್ಭದಲ್ಲಿ ಬೆಳಿಗ್ಗೆ ಈ ಮರದ ಎಲೆಗಳ ರಸವನ್ನು ಸೇವಿಸುವದರಿಂದ ವಾಂತಿ, ವಾಕರಿಕೆ, ಕರುಳಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಗ್ಯಾಸ್, ಉಬ್ಬರ,ಅಜೀರ್ಣ ಸಮಸ್ಯೆಗಳಿಗೆ ಇದು ಹೆ್ಚ್ಚು ಪ್ರಯೋಜನಕಾರಿ.
  4. ಬಾಯಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಒಸಡುಗಳಲ್ಲಿ ರಕ್ತಸ್ರಾವ ಮತ್ತು ಸಡಿಲತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
  5. ಅರಳಿಮರದ ಎಲೆಗಳ ರಸವನ್ನು ಸೇವಿಸುವುದರಿಂದ ರಕ್ತವನ್ನು ಶುದ್ಧಿ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿರುವ ಹಾನಿಕಾರಕ ಕಣಗಳನ್ನು ಸ್ವಚ್ಛಗೊಳಿಸುತ್ತದೆ. ಮತ್ತು ಇಡೀ ದೇಹಕ್ಕೆ ನೈರ್ಗಿಕ ಡಿಟಾಕ್ಸ್ ಪಾನೀಯವಾಗಿದೆ. ಅಲರ್ಜಿಗಳು, ತುರಿಕೆ,ದದ್ದುಗಳು,ಉಗುರು-ಮೊಡವೆ ಮತ್ತು ಕಲೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. ಹೀಗೆ ಹಲವಾರು ಪ್ರಯೋಜನಗಳನ್ನು ಈ ಮರದ ಎಲೆಗಳು ಹೊಂದಿವೆ.
- Advertisement -

Latest Posts

Don't Miss