Sunday, June 22, 2025

Latest Posts

ಪೆಳ್ಳಿ ಚೂಪುಲು ನಿರ್ದೇಶಕರ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..’ಕೀಡಾ ಕೋಲಾ’ ಸಿನಿಮಾ ಮುಹೂರ್ತದ ಝಲಕ್

- Advertisement -

Film News update:

ಕೆಜಿಎಫ್, RRR ಸಿನಿಮಾಗಳ ಸಕ್ಸಸ್ ಬಳಿಕ ಸೌತ್ ಸಿನಿ ದುನಿಯಾದಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ಸೆಟ್ಟೇರುತ್ತಿವೆ. ಈ ಪಟ್ಟಿಗೀಗ ಮತ್ತೊಂದು ಚಿತ್ರ ಸೇರ್ಪಡೆಯಾಗ್ತಿದೆ‌. ಅದುವೇ ಕೀಡಾ ಕೋಲಾ.. ತೆಲುಗು ಚಿತ್ರರಂಗದ ಯಂಗ್ ಅಂಡ್ ಟ್ಯಾಲೆಂಟೆಡ್ ಡೈರೆಕ್ಟರ್, ಪೆಳ್ಳಿ ಚೂಪುಲು ಹಾಗೂ ಈ ನಾಗಾರಾಣಿಕಿ ಎಮೈಂದಿ ಎಂಬ ಎರಡು ಯಶಸ್ವಿ ಸಿನಿಮಾ ನಿರ್ದೇಶಿಸಿರುವ ತರುಣ್ ಭಾಸ್ಕರ್ ಧಾಸ್ಯಮ್ ಸಾರಥ್ಯದಲ್ಲಿ ಕೀಡಾ ಕೋಲಾ ಎಂಬ ಹೊಸ ಚಿತ್ರ ತಯಾರಾಗ್ತಿದೆ. ಯೂತ್ ಫುಲ್ ಎಂಟ್ರೈನರ್ ಸಿನಿಮಾ ನಿರ್ದೇಶಿಸ್ತಿದ್ದ ತರುಣ್ ಈ ಬಾರಿ ಕ್ರೀಡಾ ಕೋಲಾ ಎಂಬ ಕ್ರೈಮ್ ಕಾಮಿಡಿ ಚಿತ್ರವನ್ನು ಸಿನಿಮಾ ಪ್ರೇಮಿಗಳಿಗೆ ಅರ್ಪಿಸಲು ಅಣಿಯಾಗ್ತಿದ್ದಾರೆ.

ವಿಜಿ ಸೈನ್ಮಾ ಬ್ಯಾನರ್‌ನಲ್ಲಿ ಪ್ರೊಡಕ್ಷನ್ ಅಡಿಯಲ್ಲಿ ಪ್ರೊಡಕ್ಷನ್ ನಿರ್ಮಾಣವಾಗಲಿರುವ ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಹೈದ್ರಾಬಾದ್ ನಲ್ಲಿ ನೆರವೇರಿದೆ. ನಿರ್ಮಾಪಕ ಸುರೇಶ್ ಬಾಬು, ನಾಯಕರಾದ ಸಿದ್ಧಾರ್ಥ್, ತೇಜ ಸಜ್ಜ, ನಂದು ಸೇರಿದಂತೆ ಹಲವು ಯುವ ನಿರ್ದೇಶಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಶ್ರೀಪಾದ್ ನಂದಿರಾಜ್, ಸಾಯಿಕೃಷ್ಣ ಗದ್ವಾಲ್, ಉಪೇಂದ್ರ ವರ್ಮಾ, ವಿವೇಕ್ ಸುಧಾಂಶು ಮತ್ತು ಕೌಶಿಕ್ ನಂದೂರಿ ಈ ಚಿತ್ರ ನಿರ್ಮಾಣ ಮಾಡಲಿದ್ದು, ಶೀರ್ಘದಲ್ಲಿ ಸ್ಟಾರ್ ಕಾಸ್ಟ್, ತಾಂತ್ರಿಕ ವರ್ಗ ಫೈನಲ್ ಆಗ್ತಿದ್ದಂತೆ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023 ರಲ್ಲಿ ಪ್ಯಾನ್ ಇಂಡಿಯಾ ಕೀಡಾ ಕೋಲಾ ತೆರೆಗೆ ಬರಲಿದೆ.

ರವಿಚಂದ್ರನ್ ಮಗನ ಮದುವೆಯಲ್ಲಿ ತಾರಾ ಬಳಗ, ರಾಜಕೀಯ ನಾಯಕರು..!

ಚಾಲೆಂಜಿಂಗ್ ಸ್ಟಾರ್ ನ ಇಗ್ನೋರ್ ಮಾಡಿದ್ರಾ ಕ್ರೇಝಿ ಸ್ಟಾರ್…!?

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ…ಜನಪದ ಕಲೆ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ವಿಪಕ್ಷ ನಾಯಕ

- Advertisement -

Latest Posts

Don't Miss