Saturday, August 9, 2025

Latest Posts

50K ಇಲ್ಲದಿದ್ರೆ ಪೆನಾಲ್ಟಿ ಗ್ಯಾರಂಟಿ : ICICI ಬ್ಯಾಂಕ್‌ನಿಂದ ದೊಡ್ಡ ಶಾಕ್!

- Advertisement -

ಬ್ಯಾಂಕ್ ಖಾತೆ ಹೊಂದಿರುವವರಿಗೆ ಐಸಿಐಸಿಐ ಬ್ಯಾಂಕ್‌ನಿಂದ ದೊಡ್ಡ ಶಾಕ್ ಎದುರಾಗಿದೆ. ಸೇವಿಂಗ್ಸ್‌ ಅಕೌಂಟ್‌ ಮಿನಿಮಮ್ ಬ್ಯಾಲೆನ್ಸ್ ನಿಯಮದಲ್ಲಿ ಬದಲಾವಣೆ ಮಾಡಿ, ಹೊಸ ಖಾತೆದಾರರಿಗೆ ಮಿನಿಮಮ್ ಬ್ಯಾಲೆನ್ಸ್‌ ಏರಿಸಲಾಗಿದೆ.

ಇಷ್ಟು ದಿನ ಐಸಿಐಸಿಐ ಬ್ಯಾಂಕ್‌ನಲ್ಲಿ ಮಿನಿಮಮ್ ಖಾತೆ ಬ್ಯಾಲೆನ್ಸ್ ನಗರ ಪ್ರದೇಶದಲ್ಲಿ 10,000 ಇತ್ತು. ಆದರೆ ಆಗಸ್ಟ್ 1ರಿಂದ ಹೊಸದಾಗಿ ಖಾತೆ ತೆರೆಯುವವರಿಗೆ ಈ ಮೊತ್ತವನ್ನು 50,000ಕ್ಕೆ ಏರಿಸಲಾಗಿದೆ. ಬ್ಯಾಲೆನ್ಸ್ ಇಡದೆ ಇದ್ದರೆ ಪ್ರತಿ ತಿಂಗಳು ಶೇಕಡಾ 6ರಷ್ಟು ಅಥವಾ 500 ಪೆನಾಲ್ಟಿ ವಿಧಿಸಲಾಗುವುದು.

ನಗರ, ಸೆಮಿ ಅರ್ಬನ್ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಮಿನಿಮಮ್ ಮೊತ್ತ ನಿಗದಿಯಾಗಿದೆ. ಹೊಸ ಖಾತೆದಾರರಿಗೆ ನಗರದಲ್ಲಿ 25,000, ಗ್ರಾಮದಲ್ಲಿ 10,000 ಮಿನಿಮಮ್ ಬ್ಯಾಲೆನ್ಸ್ ಕಡ್ಡಾಯ. ಹಳೆಯ ಖಾತೆದಾರರಿಗೆ ಹಳೆಯ ನಿಯಮವೇ ಮುಂದುವರಿಯಲಿದೆ.

ನಗರದಲ್ಲಿ 10,000, ಸೆಮಿ ಅರ್ಬನ್ 5,000. ಇದೇ ಜೊತೆಗೆ, ಉಳಿತಾಯ ಖಾತೆಗೆ ತಿಂಗಳಿಗೆ ಕೇವಲ 3 ಬಾರಿ ಉಚಿತ ಹಣ ಜಮೆ ವಹಿವಾಟು ಮಾತ್ರ ಅವಕಾಶ, ಅದರ ನಂತರ ಪ್ರತಿ ಟ್ರಾನ್ಸಾಕ್ಷನ್‌ಗೆ 150 ಶುಲ್ಕ ಪಾವತಿಸಬೇಕಾಗುತ್ತದೆ. ಹೀಗಾಗಿ, ಆಗಸ್ಟ್ 1ರಿಂದ ಖಾತೆ ತೆರೆಯುವವರು ತಮ್ಮ ಖಾತೆಯಲ್ಲಿ ಗರಿಷ್ಠ ಬ್ಯಾಲೆನ್ಸ್ ಇಡುವುದಿಲ್ಲದಿದ್ದರೆ, ದಂಡವನ್ನು ಪಾವತಿಸಬೇಕಾಗುತ್ತದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss