Saturday, July 27, 2024

Latest Posts

ಜ್ಯೋತಿಷ್ಯದ ಪ್ರಕಾರ ಸೋಮವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?

- Advertisement -

astrology:

ಪ್ರತಿಯೊಂದು ವಾರಕ್ಕೂ ಅದರದ್ದೇ ಆದ ಮಹತ್ವವಿದೆ. ಯಾವ ವಾರ ಜನಿಸಿದ್ದಾರೆ, ಎಂಬ ಆದಾರದ ಮೇಲೆ ಆ ವ್ಯಕ್ತಿಯ ಸ್ವಭಾವವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾದರೆ ಸೋಮವಾರ ಜನಿಸಿದವರ ಬಗ್ಗೆ ತಿಳಿದುಕೊಳ್ಳೋಣ .ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರ ಮತ್ತು ಗ್ರಹಗಳ ಆದಾರದ ಮೇಲೆ ಭವಿಷ್ಯದ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ ಹಾಗೆಯೇ ಹುಟ್ಟಿದ ವಾರದ ಆದಾರದ ಮೇಲೂ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯಬಹುದು ಹಾಗಾದರೆ ಯಾವ ವಾರ ಹುಟ್ಟಿದರೆ ಯಾವ ಗ್ರಹದ ಅಧಿಪತ್ಯವಿರುತ್ತದೆ ಮತ್ತು ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುವುದನ್ನು ತಿಳಿದು ಕೊಳ್ಳೋಣ.ಸೋಮವಾರ ಹುಟ್ಟಿದವರ ವ್ಯಕ್ತಿತ್ವ ಮತ್ತು ಸ್ವಭಾವವನ್ನು ತಿಳಿದುಕೊಳ್ಳೋಣ.

ಸೋಮವಾರ:
ಸೋಮವಾರ ಗ್ರಹದ ಅಧಿಪತಿ ಚಂದ್ರ ಭೂಮಿಗೆ ಹತ್ತಿರವಾಗಿರುವ ಗ್ರಹವೆಂದರೆ ಅದು ಚಂದ್ರಗ್ರಹ ಎನ್ನಬಹುದು,ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರ ಗ್ರಹಕ್ಕೆ ಒಂದು ಅದ್ಬುತವಿದೆ. ಮನುಷ್ಯರ ಮನಸ್ಸನ್ನು ನಿಯಂತ್ರಿಸುವುದು ಚಂದ್ರಗ್ರಹದ ಕಾರ್ಯವಾಗಿದೆ, ಚಂದ್ರ ಗ್ರಹವು ಕೌಟುಂಬಿಕ ಜೀವನ ಸಂಬಂಧಗಳು ಮತ್ತು ಅನುವಂಶೀಯತೆಯನ್ನು ನಿಯಂತ್ರಿಸುತ್ತದೆ. ಸೋಮವಾರ ಜನಿಸಿದವರು ಚಂದ್ರಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತಾರೆ ಚಂದ್ರನು ನೀಚ ಸ್ಥಿತಿಯಲ್ಲಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೋಮವಾರ ಜನಿಸಿದವರು ದಯಾ ಗುಣವನ್ನು ಹೊಂದಿರುತ್ತಾರೆ ಹಾಗೂ ಎಲ್ಲರಲ್ಲೂ ಹೊಂದಿಕೊಳ್ಳುವ ಮನೋಭಾವ, ಪೊಸೆಸೀವ್‌ನೆಸ್ ,ಕಾಳಜಿ ಮತ್ತು ಮಾತೃಗುಣವನ್ನು ಸಹ ಹೊಂದಿರುತ್ತಾರೆ.

ಸೋಮವಾರ ಹುಟ್ಟಿರುವವರು ಮಹಿಳೆಯರನ್ನು ಗೌರವಿಸುತ್ತಾರೆ ಹಾಗೂ ಕೌಟುಂಬಿಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ, ಈ ವ್ಯಕ್ತಿಗಳು ಹೆಚ್ಚು ಅಂತರ್ಮುಖಿ ಸ್ವಭಾವವನ್ನು ಹೊಂದಿರುತ್ತಾರೆ.ಇವರು ಭಾವನೆಗಳಿಗೆ ಹಾಗೂ ವ್ಯಕ್ತಿತ್ವಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸೋಮವಾರದಂದು ಜನಿದವರ ಅದೃಷ್ಟದ ಸಂಖ್ಯೆ 2 ಆಗಿರುತ್ತದೆ. ಈ ವ್ಯಕ್ತಿಗಳು ಈ ಸಂಖ್ಯೆಗೆ ಹೆಚ್ಚು ಮಹತ್ವ ನೀಡಿದರೆ ಉತ್ತಮ ಫಲಿತಾಂಶಗಳನ್ನು ಕಾಣಬಹುದು ಹಾಗೂ ಸೋಮವಾರದಂದು ಶಿವ ಮತ್ತು ಗಣೇಶನನ್ನು ಪೂಜಿಸಬೇಕು ಹೀಗೆ ಮಾಡಿದರೇ ಜೀವನದಲ್ಲಿ ಯಶಸ್ಸನ್ನು ಕಾಣಬಹುದು .ಈ ದಿನ ಜನಿಸಿದವರ ವೃತ್ತಿಜೀವನದ ವ್ಯಾಪಾರ ಇವರಿಗೆ ಕೂಡಿ ಬರುತ್ತದೆ, ಆದ್ದರಿಂದ ಇವರಲ್ಲಿ ವ್ಯವಹಾರದ ಜ್ಞಾನ ಎಲ್ಲರಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ .ಒಂದು ವೇಳೆ ಉದ್ಯಮಿಯಾದರೆ,ತಮ್ಮನ್ನು ತಾವು ನೂರಕ್ಕೆ ನೂರು ಪಟ್ಟು ತೊಡಗಿಸಿಕೊಂಡು ದೊಡ್ಡ ಮಟ್ಟದ ಲಾಭವನ್ನು ಗಳಿಸುತ್ತಾರೆ ಹಾಗೂ ಪರಿಶ್ರಮ ಮತ್ತು ಶಿಸ್ತಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಇವರಿಗೆ ವೃತ್ತಿಜೀವನದ ಯಶಸ್ಸು ಖಚಿತವಾಗಿರುತ್ತದೆ ಕೆಲಸದ ಸ್ಥಳದಲ್ಲಿ ಇತರರನ್ನು ಆಕರ್ಷಿಸುವುದಲ್ಲದೆ, ಅವರ ಮೆಚ್ಚುಗೆಗೆ ಪಾತ್ರರಾಗುತ್ತಾರೆ .

ಇವರು ಒಮ್ಮೆ ಯಾರನ್ನಾದರೂ ತಮ್ಮವರು ಎಂದು ಭಾವಿಸಿದರೆ ಅವರ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಕಾಳಜಿಯನ್ನು ವಹಿಸುತ್ತಾರೆ.ಬೇರೆಯವರ ಭಾವನೆಗಳಿಗೆ ಹೆಚ್ಚು ಬೆಲೆಯನ್ನು ಕೊಡುತ್ತಾರೆ ,ಎದುರಿನವರನ್ನು ಬೇಗ ನಂಬಿಬಿಡುವ ಇವರು, ಮುಂದಾಲೋಚನೆಯನ್ನೇ ಮಾಡುವುದಿಲ್ಲ.ಇವರು ಪ್ರೀತಿಯಲ್ಲೂ ಸಹ ಬಹುಬೇಗ ಬಿದ್ದುಬಿಡುತ್ತಾರೆ ಆದರೆ, ಇತರರನ್ನು ಕಾಳಜಿ ವಹಿಸುವ ಭರದಲ್ಲಿ ತಮ್ಮನ್ನು ತಾವು ಮರೆಯಬಾರದು. ಅಲ್ಲದೆ, ಇವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ. ದ್ವೇಷ ಜಗಳವನ್ನು ಇಷ್ಟಪಡದ ಈ ವ್ಯಕ್ತಿಗಳು, ಸದಾ ನೆಮ್ಮದಿಯ ಜೀವನವನ್ನು ಸಾಗಿಸುತ್ತಾರೆ .

ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!

ಅಮಾವಾಸ್ಯೆಯ ದಿನ ಮಾಡ ಬೇಕಾದ ತ್ರಿಕೋನ ಪೂಜ ನಿಯಮಗಳು …!

ಕುಬೇರನ ಅಹಂ ಇಳಿಸಿದ ಸುಮುಖ ….!

 

- Advertisement -

Latest Posts

Don't Miss