Friday, December 13, 2024

Latest Posts

ಕುರಾನ್‌ಗೆ ಅವಮಾನ ಮಾಡಿದ್ದಾನೆಂದು ಆರೋಪಿಸಿ, ವ್ಯಕ್ತಿಯನ್ನು ಸುಟ್ಟ ಜನ

- Advertisement -

International News: ಕುರಾನ್‌ ಕೆಲ ಪುಟಗಳನ್ನು ಸುಟ್ಟು ಹಾಕುವ ಮೂಲಕ, ಕುರಾನ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ, ವ್ಯಕ್ತಿಯೋರ್ವನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನದ ಪೊಲೀಸ್ ಠಾಣೆಯ ಮುಂದೆ ಈ ಘಟನೆ ನಡೆದಿದ್ದು, ಕುರಾನ್‌ನ ಕೆಲವು ಭಾಗಗಳನ್ನು ಸುಟ್ಟುಹಾಕಿ ಓರ್ವ ವ್ಯಕ್ತಿ ಕುರಾನ್‌ಗೆ ಅವಮಾನಿಸಿದ್ದಾನೆಂದು ಆರೋಪಿಸಿ, 20 ಜನ, ಆತನನ್ನು ಜೀವಂತವಾಗಿ, ದಹಿಸಿದ್ದಾರೆ.

ಆ ವ್ಯಕ್ತಿ ಪ್ರವಾಸಿಗನಾಗಿದ್ದು, ಆತ ಒಂದೇ ಒಂದು ಮಾತು ಹೇಳಿದ್ದಕ್ಕೆ ಈ ರೀತಿ ಮಾಡಿದ್ದಾರೆ ಅಂತಾ ಹೇಳಲಾಗುತ್ತದೆ. ಇನ್ನೊಂದೆಡೆ ಕುರಾನ್ ಪುಟ ಸುಟ್ಟಿದ್ದಾನೆಂದು ಹೇಳಲಾಗುತ್ತಿದೆ. ಕುರಾನ್‌ನಲ್ಲಿ ಭೂಮಿ ಸಮತಟ್ಟಾಗಿದೆ ಎಂದು ಹೇಳಲಾಗಿದೆ. ಆದರೆ ಈ ಪ್ರವಾಸಿಗ, ಭೂಮಿ ಸಮತಟ್ಟಾಗಿಲ್ಲ, ಬದಲಾಗಿ, ಭೂಮಿ ಗುಂಡಗಿದೆ, ಅಮೂಲಾಗ್ರವಾಗಿದೆ ಎಂದಿದ್ದಾನೆ.

ಇದು ಆ ವ್ಯಕ್ತಿ ಕುರಾನ್‌ಗೆ ಮಾಡಿದ ಅವಮಾನವೆಂದು ಸಿಟ್ಟಾದ ಪಾಕಿಸ್ತಾನಿಗಳು, ಪೊಲೀಸ್ ಠಾಣೆಯ ಎದುರು ಮೈಕ್ ಹಿಡಿದು, ಹಲವರನ್ನು ಸೇರಿಸಿ, ಆ ವ್ಯಕ್ತಿಯನ್ನು ಚೆನ್ನಾಗಿ ಹೊಡೆದಿದ್ದಾರೆ. ಬಳಿಕ ಸುಟ್ಟು ಹಾಕಿದ್ದಾರೆ. ಈ ದುಷ್ಟರನ್ನು ತಡೆಯಲು ಪೊಲೀಸರಿಂದ ಕೂಡ ಸಾಧ್ಯವಾಗಿಲ್ಲ. ಅಲ್ಲಿನ ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ, ಅವರನ್ನೂ ಎದುರಿಸಿ, ಪಾಕಿಸ್ತಾನಿಗಳು ಇಂಥ ಹೇಯ ಕೃತ್ಯ ಮಾಡಿದ್ದಾರೆ.

- Advertisement -

Latest Posts

Don't Miss