Saturday, November 15, 2025

Latest Posts

ಕಾಂಗ್ರೆಸ್ ಅಪಪ್ರಚಾರಕ್ಕೆ ಜನ ಪಾಠ ಕಲ್ಸಿದ್ರು : NDA ಭರ್ಜರಿ ಗೆಲುವಿನ ಕಾರಣ ಇದೇ!

- Advertisement -

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ನಾಯಕರ ಮತಕಳ್ಳತನ ಆರೋಪಗಳಿಗೆ ಯಾವುದೇ ತೂಕ ಇಲ್ಲವೆಂಬುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತಕಳ್ಳತನಕ್ಕೆ ಸಂಬಂಧಿಸಿದಂತೆ ಸಾಕ್ಷಿ ಇದ್ದರೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವಂತೆ ನಾವು ಹಲವು ಬಾರಿ ಹೇಳಿದ್ದೇವೆ. ಆದರೆ ಕಾಂಗ್ರೆಸ್ ನಾಯಕರು ದೂರು ನೀಡದೇ, ಅದನ್ನೇ ಚುನಾವಣಾ ತಂತ್ರವಾಗಿಯೇ ಬಳಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಅರ್ಧ ಸತ್ಯ ಹೇಳುವುದು, ಜನರನ್ನು ತಪ್ಪುದಾರಿಗೆ ನಡೆಸುವುದು ಮತ್ತು ಅಪಪ್ರಚಾರ ಮಾಡುವುದು ಕಾಂಗ್ರೆಸ್‌ನ ನೆಲೆಯಾಗಿದೆ. ಬಿಹಾರ ಚುನಾವಣೆಯ ವೇಳೆ ಅವರು ವಿದೇಶದಲ್ಲಿ ಕಾಫಿ ಕುಡಿಯುತ್ತಿದ್ದರೆ, ನಮ್ಮ ನಾಯಕರು ಹಳ್ಳಿಯಿಂದ ಹಳ್ಳಿಗೆ ತೆರಳಿ ಪ್ರಚಾರ ಮಾಡಿದರು. ಅದೇ ಎನ್‌ಡಿಎ ಮೈತ್ರಿಕೂಟಕ್ಕೆ ಮಹತ್ವದ ಜಯ ತಂದುಕೊಟ್ಟಿದೆ. ಈ ಜಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದ ಫಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಎಂದಿಗೂ ಅಭಿವೃದ್ಧಿ ರಾಜಕಾರಣ ಮಾಡಿಲ್ಲ. ಸಮಾಜ ವಿಭಜನೆ ಮೂಲಕ ಲಾಭ ಪಡೆಯುವುದು ಅವರ ನಿಲುವು. ದೇಶ ಏಕತೆಯತ್ತ ಸಾಗುತ್ತಿದೆ, ವಿಕಸಿತ ಭಾರತದ ಕನಸಿಗೆ ಜನರು ಸ್ಪಂದಿಸುತ್ತಿದ್ದಾರೆ. 2028ರಲ್ಲಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಜನರ ಹಿತಕ್ಕಾಗಿ ಯೋಜನೆ ರೂಪಿಸುವುದು ಬೇರೆ, ಹಣಕಾಸಿನ ಸಾಮರ್ಥ್ಯವಿಲ್ಲದೆ ಗ್ಯಾರಂಟಿ ಘೋಷಿಸುವುದು ಬೇರೆ. ಹಣಕಾಸಿನ ಮಿತಿಯನ್ನು ಲೆಕ್ಕಿಸದೆ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿರುವ ಪರಿಣಾಮ, ಈಗ ಗ್ಯಾರಂಟಿಗಳಿಗೆ ಹಣ ಒದಗಿಸಲು ಕಷ್ಟವಾಗುತ್ತಿದೆ ಎಂದು ಟೀಕೆ ಮಾಡಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss