www.karnatakatv.net : ದೇಶದಲ್ಲಿ ಕೊರೊನಾ ಹಾವಳಿ ಇಂದ ಬೇಸತ್ತ ಜನರಿಗೆ ಈಗ ಮತ್ತೋಂದು ಅಗ್ನಿ ಪರೀಕ್ಷೆ ಮುಂದಾಗಿದೆ. ಉತ್ತರ ಕನ್ನಡ ಭಾಗದ ಜನರು ಮಳೆಯಿಂದ ತತ್ತರಿಸಿ ಹೊಗಿದ್ದು. ಪ್ರವಾಹದಿಂದ ಮನೆ, ಆಸ್ತಿ ಜಾನುವಾರಗಳನ್ನು ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ಜನರೆ ಹೇಚ್ಚು. ಆದರೆ ನೂತನ ಸಿಎಂ ಬಂದ ಮೇಲೆ ಎಲ್ಲವು ಪರಿಹಾರ ವಾಗುವುದು ಎಂದು ಯೊಚಿಸಿದ್ದ ಜನರಿಗೆ ಈಗ ಬೇಸರವಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಮರುದಿನ ಜಿಲ್ಲಾ ಪ್ರವಾಸವನ್ನು ಕೈಗೊಂಡ ಬಸವರಾಜ್ ಬೊಮ್ಮಾಯಿ ಅವರು ಸಂತ್ರಸ್ಥರನ್ನು ಭೇಟಿ ಯಾಗಿಲ್ಲ ಎನ್ನುವುದೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಅನೇಕ ಜನರು ಬಿದಿಗೆ ಬಂದಿದ್ದು ಪರಿಹಾರವನ್ನು ಕೊಡಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ.




