Saturday, May 10, 2025

Latest Posts

School : ಎಣ್ಮಕಜೆ ಗ್ರಾ.ಪಂ. ಸಾಂತ್ವನ ವಿಶೇಷ ಬಡ್ಸ್ ಶಾಲೆ ನೂತನ ಕಟ್ಟಡ ಉದ್ಘಾಟನೆ

- Advertisement -

Perla News : ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಒಳಪಡಿಸಿ ಎಣ್ಮಕಜೆ ಗ್ರಾಪಂ ಬಜಕೂಡ್ಲು ಸಮೀಪದ  ಕಾನ ಎಂಬಲ್ಲಿ ನಿರ್ಮಿಸಿದ ಸಾಂತ್ವನ ವಿಶೇಷ ಬಡ್ಸ್ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಸಂಜೆ ಉದ್ಘಾಟಿಸಲಾಯಿತು‌.

ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗ  ಕಲ್ಯಾಣ ಇಲಾಖೆ ದೇವಸ್ವಂ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೆ.ರಾಧಾಕೃಷ್ಣನ್ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು‌.

ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಉಪಾಧ್ಯಕ್ಷೆ ಡಾ.ಫಾತಿಮತ್ ಜಹನಾಸ್ ಹಂಸಾರ್,ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಸೌದಾಭಿ ಹನೀಫ್, ಜಯಶ್ರೀ ಕುಲಾಲ್, ಬ್ಲಾಕ್‌‌ ಪಂ.ಸದಸ್ಯ ಅನಿಲ್‌ ಕುಮಾರ್ ಕೆ.ಪಿ., ಕೆ.ಎಸ್.ಎಸ್.ಎಂ. ಜಿಲ್ಲಾ ಸಂಯೋಜಕ ಅಶ್ರಫ್, ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳ‌ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶುಭ ಹಾರೈಸಿದರು.ಪ್ರಭಾರಿ ಪಂ.ಕಾರ್ಯದರ್ಶಿ ಪ್ರೇಮ್ ಚಂದ್ ಪಿ ಎಸ್ ವರದಿ ಮಂಡಿಸಿದರು.ಬಡ್ಸ್ ಶಾಲೆ ಪ್ರಿನ್ಸಿಪಾಲ್‌ ಮರಿಯಾಂಬಿ ವಂದಿಸಿದರು‌.

 

- Advertisement -

Latest Posts

Don't Miss