Tuesday, October 14, 2025

Latest Posts

ಫೋನ್ ಚಾರ್ಜ್ ಮಾಡುವಾಗ ಈ ತಪ್ಪನ್ನು ಮಾಡಬೇಡಿ…

- Advertisement -

Technology News:

ಸ್ಮಾರ್ಟ್ ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಈ  ತಪ್ಪುಗಳನ್ನು ಮಾಡಲೇ ಬೇಡಿ. ಚಾರ್ಜ್ ಮಾಡುವಾಗ ಫೋನಿ ನೊಂದಿಗೆ ನೀಡಿರುವ ಅಧಿಕೃತ ಚಾರ್ಜರ್ ಅನ್ನು ಮಾತ್ರವೇ ಬಳಕೆ ಮಾಡಿರಿ. ಕಂಪನಿಯ ಚಾರ್ಜರ್  ಇಲ್ಲ ಅಂತಾ ಬೇರೆ ಸಂಸ್ಥೆಯ, ಭಿನ್ನ ಸಂಸ್ಥೆ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ಬ್ಯಾಟರಿ ಲೈಫ್‌ಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ನಿಮ್ಮ ಬ್ಯಾಟರಿ  ಫುಲ್ ವೀಕ್  ಆಗುವ  ಸಾಧ್ಯತೆ ಇವೆ.ಜೊತೆಗೆ ಫೋನ್‌ ಮೇಲೆಂದ ಮೇಲೆ ಬಿಸಿ ಆಗುವ ಹಾಗೂ ಫೋನ್‌ ಸ್ಪೋಟ ಆಗುವ ಸಾಧ್ಯತೆಗಳು ಇರುತ್ತವೆ ಎಂದು ತಿಳಿದು ಬಂದಿದೆ.

100% ಚಾರ್ಜ್  ಬೇಡಬೇಡಿ ಸ್ಮಾರ್ಟ್ಫೋನ್  ಚಾರ್ಜ್  ಮಾಡುವಾಗ ಕೆಲವರು ಸಾಮಾನ್ಯವಾಗಿ ಬ್ಯಾಟರಿ ಫುಲ್ 1೦೦%  ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ಅಲ್ಲ. ಈ ನಿಟ್ಟಿನಲ್ಲಿ ಎಂದಿಗೂ ಫುಲ್ 100% ಚರ‍್ಜ್ ಮಾಡಲೇಬೇಡಿ. ಚರ‍್ಜಿಂಗ್ ೯೦ ರ ಗಡಿ ತಲುಪಿದರೆ ಸಾಕು ಅಥವಾ 92 ರಿಂದ 97  ಪರ್ಸೆಂಟ್  ಇದ್ದಾಗ ಚಾರ್ಜಿಂಗ್  ನಿಲ್ಲಿಸಿ. ಇದು ಬ್ಯಾಟರಿ ಬಾಳಿಕೆಯನ್ನು ವೃದ್ಧಿಸುತ್ತದೆ.

ರಾತ್ರಿಯಿಡಿ ಚಾರ್ಜ್  ಮಾಡಬೇಡಿ ಅನೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್  ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಅಭ್ಯಾಸ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್  ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.

ಚಾರ್ಜ್ ಮಾಡುವಾಗ ಫೋನ್‌ ಬಳಕೆ ಉತ್ತಮವಲ್ಲ ಸ್ಮಾರ್ಟ್ ಫೋನ್  ಚಾರ್ಜ್ ಗೆ ಹಾಕಿದಾಗ ಫೋನ್ ಬಳಕೆ ಮಾಡಬೇಡಿರಿ. ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಅದನ್ನು ಈಗಲೇ ಬಿಟ್ಟುಬಿಡಿ.

ಮೇಡ್ ಇನ್ ಇಂಡಿಯಾ ಐಫೋನ್ ತಯಾರು ಮಾಡಲಿದೆಯಾ ಟಾಟಾ ಕಂಪೆನಿ..?!

ಇಂಟರ್ ನೆಟ್ ಇಲ್ಲದೆಯೂ ಜಿ-ಮೇಲ್ ಬಳಸಬಹುದು..?!

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿಸುದ್ದಿ…!

- Advertisement -

Latest Posts

Don't Miss