Monday, September 9, 2024

Latest Posts

1 ವರ್ಷದ ಕದ್ದಾಲಿಕೆ ತನಿಖೆ, ಕುಮಾರಸ್ವಾಮಿಯೇ ಟಾರ್ಗೆಟ್..!

- Advertisement -

ಕರ್ನಾಟಕ ಟಿವಿ : ಆಗಸ್ಟ್ 1, 2018ರಿಂದ ಕುಮಾರಸ್ವಾಮಿ ಸರ್ಕಾರದ ಕಡೇ ದಿನದ ವರೆಗೂ ಟ್ಯಾಪ್ ಮಾಡಲಾಗಿರುವ ಬಗ್ಗೆ ಸಿಬಿಐ ತನಿಖೆ ಮಾಡುವಂತೆ ಅಧಿಕೃತ ಆದೇಶ ಮಾಡಲಾಗಿದೆ.. ಸಂಬಂಧಪಟ್ಟಅಧಿಕಾರಿಗಳು ಪ್ರಕರಣಕ್ಕೆ ಸಂಬಂಧ ಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನ ಸಿಬಿಐಗೆ ವಹಿಸಲು ಆದೇಶ ಮಾಡಲಾಗಿದೆ. ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಒಂದು ವರ್ಷದ ಅವಧಿಯಲ್ಲಿ ಆದ ಕದ್ದಾಲಿಕೆಯ ಸಂಪೂರ್ಣ ಮಾಹಿತಿ ನೀಡುವಂತೆ ಆದೇಶ ಮಾಡಲಾಗಿದೆ..

ಸಿದ್ದರಾಮಯ್ಯ, ಯಡಿಯೂರಪ್ಪ ಟೀಂ ಕಾಲ್ ಕಂಪ್ಲೀಟ್ ಕದ್ದಾಲಿಕೆ..!?

ಮಾಹಿತಿ ಪ್ರಕಾರ ಯಡಿಯೂರಪ್ಪ ಟೀಂ ಹಾಗೂ ಸಿದ್ದರಾಮಯ್ಯ ಆಪ್ತ ಹಾಗೂ ಪುತ್ರ ಯತೀಂದ್ರ ಕಾಲ್ ಕದ್ದಾಲಿಕೆ ಮಾಡಲಾಗಿದೆ ಅಂತ ಹೇಳಲಾಗ್ತಿದೆ.. ಅಧಿಕೃತವಾಗಿ ಯಾರ್ಯಾರ ಫೋನ್ ಕದ್ದಾಲಿಕೆ ಮಾಡಲಾಗಿದೆ ಅಂತ ಬಹಿರಂಗವಾದ್ರೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇದೆ.. ಫೋನ್ ಟ್ಯಾಪಿಂಗ್ ಲಿಸ್ಟ್ ನಲ್ಲಿರುವ ಕಾಂಗ್ರೆಸ್ ನಾಯಕರ ಹೆಸರು ಬಹಿರಂಗವಾದ್ರೆ ದೋಸ್ತಿಗಳಲ್ಲೇ ಕುಸ್ತಿಯಾಗೋದು ಗ್ಯಾರಂಟಿ..

ನಿನ್ನೆಯಷ್ಟೆ ಪ್ರಕರಣವನ್ನ ಸಿಬಿಐಗೆ ವಹಿಸುತ್ತಿರೋದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ರು.. ಕದ್ದಾಲಿಕೆಯನ್ನ ಸಿಬಿಐಗೆ ವಹಿಸುತ್ತಿದ್ದಂತೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ಹಿಂದಿನ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸರ್ಕಾರಅಧಿಯ ಕದ್ದಾಲಿಕೆ ಬಗ್ಗೆ ತನಿಖೆ ಮಾಡಬೇಕು ಅಂತ ಜೆಡಿಎಸ್ ನಾಯಕರು ಒತ್ತಾಯಿಸಿದ್ದಾರೆ. ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಕೇಂದ್ರ ಸರ್ಕಾರ ನಮ್ಮ ಕುಟುಂಬದ ಫೋನ್ ಕದ್ದಾಲಿಕೆ ಮಾಡಿದೆ. ಈ ಬಗ್ಗೆಯೂ ಸಿಬಿಐ ತನಿಖೆ ಮಾಡಲಿ ಅಂತ ಒತ್ತಾಯಿಸಿದ್ದಾರೆ.. ಕಾಂಗ್ರೆಸ್ ನಾಯಕರು ಒಂದಷ್ಟು ಜನ ಸಿಬಿಐ ತನಿಖೆಯನ್ನ ಒಳಗೊಳಗೆ ಸ್ವಾಗತ ಮಾಡಿದ್ದಾರೆ.. ಆದ್ರೆ ಜೆಡಿಎಸ್ ನಾಯಕರು ಮಾತ್ರ ಸಿಬಿಐ ತನಿಖೆಯಿಂದ ಕಂಗಾಲಾಗಿರೋದು ಮಾತ್ರ ಸತ್ಯ..

- Advertisement -

Latest Posts

Don't Miss