ಸರ್ಕಾರ ಉಳಿಸಿಕೊಳ್ಳಲು ದೋಸ್ತಿಗಳು ಬರೀ ಬಿಜೆಪಿ ಶಾಸಕರ , ನಾಯಕರ ಫೋನ್ ಮಾತ್ರ ಕದ್ದಾಲಿಸಿಲ್ಲ, ಜೆಡಿಎಸ್, ಕಾಂಗ್ರೆಸ್ ನಾಯಕರ ಫೋನ್ ಕದ್ದಾಲಿಕೆ ಆರೋಪದ ಜೊತೆ ಸಮುದಾಯದ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ ಅನ್ನುವ ಅಂಶ ಇದೀಗ ಹೊರ ಬಿದ್ದಿದರ. ಮೊದಲು ವಾಲ್ಮೀಕ ಸಮುದಾಯದ ಶಾಸಕರು ಸರ್ಕಾರದ ವಿರುದ್ಧ ಬಂಡೆದ್ದಾಗ ಆ ಸಮುದಾಯದ ಶಾಸಕರ ಜೊತೆ ಆ ಸಮುದಾಯದ ಸ್ವಾಮೀಜಿ ಫೋನ್ ಕದ್ದಾಲಿಕೆ ಶುರು ಮಾಡಿದ್ರಂತೆ. ನಂತರ ಸಿದ್ದರಾಮಯ್ಯ ಗೆ ಕುಲಬಾಂಧವರ ಸ್ವಾಮೀಜಿ ಏನಾದ್ರೂ ಸರ್ಕಾರ ಬೀಳಿಸಲು ಐಡಿಯಾ ಕೊಟ್ರಾ ಅಂತ ಬೆದರಿದ ಜೋಡೆತ್ತುಗಳು ಸಿದ್ದರಾಮಯ್ಯ ಆಪ್ತರು ಸೇರಿದಂತೆ ಕುರುಬ ಸಮುದಾಯದ ಸ್ವಾಮೀಜಿ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಅನ್ನುವ ಆರೋಪ ಕೇಳಿಬರ್ತಿದೆ.
ನಿರ್ಮಲಾನಂದ ಶ್ರೀಗಳ ಫೋನ್ ಕೂಡ ಟ್ಯಾಪ್..?
ಇನ್ನು ಕೆಲ ಜೆಡಿಎಸ್ ಶಾಸಕರು ಕುಮಾರಸ್ವಾಮಿ ವಿರುದ್ಧ ಬಂಡೆದ್ದು ಒಕ್ಕಲಿಗ ಮಠದ ಸ್ವಾಮೀಜಿ ಬಳಿ ಸಿಎಂ ಬಗ್ಗೆ ದೂರು ನೀಡಿದ್ರಂತೆ. ಇಲ್ಲದೆ ನಿರ್ಮಲಾನಂದ ಶ್ರೀ ಆರ್ ಎಸ್ ಎಸ್ ನಾಯಕರು ಹಾಗೂ ಉತ್ತರಪ್ರದೇಶದ ಸಿಎಂ ಜೊತೆ ಉತ್ತಮ ಬಾಂಧವ್ಯ ಇರುವ ಹಿನ್ನೆಲೆ ಶ್ರೀಗಳ ಫೋನ್ ಸಹ ಕದ್ದಾಲಿಸಲಾಗಿದೆ ಅನ್ನುವ ಆರೋಪ ಕೇಳಿ ಬಂದಿದೆ. ಜಿಟಿ ದೇವೇಗೌಡ, ಗೋಪಾಲಯ್ಯ, ನಾರಾಯಣಗೌಡ ಸೇರಿ ಇನ್ನು ಹಲವರು ಕುಮಾರಸ್ವಾಮಿ ತಮ್ಮನ್ನ ಕಡೆಗಣಿಸ್ತಿದ್ದಾರೆ ಅಂತ ದೂರು ನೀಡಿದ್ರಂತೆ..
ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದರೆ ಫೋನ್ ಟ್ಯಾಪಿಂಗ್ ಹಗರಣದಲ್ಲಿ ಯಾವುದೇ ರಾಜೀ ಪಂಚಾಯ್ತಿಯಾಗದೆ ತನಿಖೆ ನಡೆದ್ರೆ ಪ್ರಭಾವಿ ರಾಜಕಾರಣಿ ಜೈಲು ಸೇರೋದು ಗ್ಯಾರಂಟಿ ಅನ್ಸುತ್ತೆ.
ಯಸ್ ವೀಕ್ಷಕರೆ ನಿಮ್ಮ ಪ್ರಕಾರ ಸರ್ಕಾರ ಉಳಿಸಿಕೊಳ್ಳಲು ಫೋನ್ ಟ್ಯಾಪಿಂಗ್ ಮಾಡಿದ್ದು ಸರೀನಾ..? ತಪ್ಪಾ ಕಾಮೆಂಟ್ ಮಾಡಿ