Wednesday, October 29, 2025

Latest Posts

ರಾಯಚೂರಿನ ಬಡ ಹೆಣ್ಣು ಮಕ್ಕಳಿಗೆ ಶಾಪವಾಗಿ ಕಾಡಿದ ಪಿಡ್ಸ್..!

- Advertisement -

www.karnatakatv.net: ರಾಯಚೂರು: ನಗರದ ಬಡ ಹೆಣ್ಣು ಮಕ್ಕಳಿಗೆ ಶಾಪವಾಗಿ ಕಾಡುತ್ತಿದೆ ಈ ಖಾಯಿಲೆ. ಹುಟ್ಟಿದಾಗ ಚೆನ್ನಾಗಿಯೇ ಇದ್ದ ಮಕ್ಕಳಿಗೆ ಇದ್ದಕ್ಕಿದ್ದ ಹಾಗೆ ಪಿಡ್ಸ್ ಖಾಯಿಲೆ ಕಾಣಿಸಿ ಕೊಂಡಿದೆ.

ಹೌದು..ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಬಡಾವಣೆಯಲ್ಲಿ ಇಮಾಮುದ್ದೀನ್ ಎಂಬುವವರಿಗೆ ಸಂಭAದಿಕರ ಅಕ್ಕನ ಮಗಳನ್ನೇ ಮದುವೇ ಯಾಗಿದ್ದ. ಈತಿನಿಗೆ 4 ಮಂದಿ ಹೆಣ್ಣು ಮಕ್ಕಳು ಮೊದಲ ಮಗಳು ಚೆನ್ನಾಗಿ ಇದ್ದಾಳೆ, ಆದರೆ ಎರಡು ಮೂರು ಮತ್ತು ನಾಲ್ಕನೇ ಮಕ್ಕಳಿಗೆ ಪಿಡ್ಸ್ ಖಾಯಿಲೆ ಹರಡಿತು. ಉಜಮಾ, ಗೌಸಿಯಾ, ಸಮಾ ಎಂಬ ಹೆಣ್ಣು ಮಕ್ಮಳಿಗೆ ಪಿಡ್ಸ್ ಖಾಯಿಲೆ ಕಾಡುತ್ತಿದೆ.

ವೃತಿಯಲ್ಲಿ ಮೆಕ್ಯಾನಿಕ್ ಆಗಿರುವ ಸೈಯದ್ ಇಮಾಮುದ್ದೀನ್, ದಿನಕ್ಕೆ 200 ರಿಂದ 250 ರೂಪಾಯಿ ದುಡಿಯುತ್ತಾರೆ. ಬಂದ ಹಣದಿಂದ ಮೂರು ಹೊತ್ತು ಊಟ, ಮನೆ ಬಾಡಿಗೆಗೂ ಸಾಲದು ಎನ್ನುತ್ತಾರೆ. ಒಪ್ಪತ್ತಿನೂಟಕ್ಕೂ ದುಡಿಯಲೇ ಬೇಕಾದ ಮೆಕ್ಯಾನಿಕ್ ಗೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾನೆ. ಮಕ್ಕಳ ಚಿಕಿತ್ಸೆಗೆ ಈಗಾಗಲೇ ಹತ್ತು ಲಕ್ಷಕ್ಕೂ ಅಧಿಕ ಹಣ ವ್ಯಯವಾಗಿದೆ. ಕಳೆದ 11 ವರ್ಷದಿಂದ ಕಣ್ಣೀರಲ್ಲೇ ಕೈ ತೊಳೆಯುತ್ತಿದೆ ಈ ಕುಟುಂಬ. ಇವರಿಗೆ ವಾಸಿಸಲು ಸ್ವಂತ ಮನೆಯಿಲ್ಲ, ಬಾಡಿಗೆ ಬಿದಿರಿನ ತಟ್ಟಿ ಮನೆಯಲ್ಲೇ ಬಡ ಕುಟುಂಬದ ವಾಸ ಮಾಡುತ್ತಿದೆ. ರಾಜ್ಯದಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋದರು ಮಕ್ಕಳು ಮಾತ್ರ ಆರೋಗ್ಯ ವಂತರು ಆಗುತ್ತಿಲ್ಲ. ವೈದ್ಯರು ರಕ್ತ ಸಂಬAಧದಲ್ಲಿ ಮದುವೆಯಾಗಿದ್ದೇ ಸಮಸ್ಯೆ ಎನ್ನುತ್ತಿದ್ದಾರೆ.

ಇನ್ನೂ ಈ ಕುಟುಂಬ ಸಾಲದ ಹೋರೆ ಹೊತ್ತಿಕೊಂಡಿದ್ದು, ಸರ್ಕಾರ ಮತ್ತು ಜನರ ಸಹಾಯವನ್ನು ಕೇಳುತ್ತಿದೆ. ಕುಳಿತಲ್ಲೇ ಎಲ್ಲವನ್ನೂ ಮಾಡುವ ಮಕ್ಕಳ ಆರೈಕೆಯಲ್ಲೇ ಬಸವಳಿದ ತಾಯಿ..ಮಕ್ಕಳು ಗುಣ ಮುಖರಾಗಲೆಂದು ತಿರುಗದ ಊರುಗಳಿಲ್ಲ. ಸುತ್ತದ ಗುಡಿ ಗುಂಡಾರಗಳಿಲ್ಲ..ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಕ್ಕೆ ಗೆಳೆಯನೇ ಆಸರೆ ಯಾಗಿದ್ದಾನೆ. ವೃತ್ತಿಯಲ್ಲಿ ಆರ್.ಎಂಪಿ ವೈದ್ಯನಾಗಿರುವ ಅಲ್ಲಾಬಂದಾಸಾಬ್ ನೆರವಾಗಿದ್ದು, ತಂದೆ ಇಮಾಮ್ ರೊಟ್ಟಿಗೆ ಮಕ್ಕಳನ್ನ ಆಸ್ಪತ್ರೆಗೆ ಕರೆದೊಯ್ಯಲು ಇವರ ನೆರವಿಗೆ ಬಂದಿದಾನೆ. ಸರ್ಕಾರ, ಜನಪ್ರತಿನಿಧಿಗಳು ದಾನಿಗಳ ನೆರವಿಗೆ ಮನವಿ ಮಾಡುತ್ತಿರುವ ಈ ಕುಟುಂಬ ಕನಿಷ್ಟ ಅವಲಂಬನೆ ರಹಿತ ಜೀವನ ಸಿಕ್ಕರೆ ಸಾಕು ಎನ್ನುತ್ತಿದ್ದಾರೆ. ಸರ್ಕಾರದಿಂದ ಒಂದು ಸೂರು, ಮಕ್ಕಳ ಚಿಕಿತ್ಸೆ ಈ ಎರಡೂ ಕೆಲಸಗಳಾದರೆ ಸಾಕು ಎಂದು ಮನವಿ ಮಾಡಿತ್ತಿದಾರೆ.

ಅನಿಲ್‌ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss