Beauty tips:
ಮುಖದಲ್ಲಿ ಬಂಗು ಏಕೆ ಬರುತ್ತದೆ ಇದಕ್ಕೆ ಕಾರಣವೇನು ಅದನ್ನು ಮೊದಲು ತಿಳಿದು ಕೊಳ್ಳಬೇಕು ನಂತರ ಅದ್ಕಕೆ ಪರಿಹಾರವನ್ನು ಕಂಡುಕೊಳ್ಳ ಬಹುದು ,ಮುಖದ ಮೇಲೆ ಬಂಗು ಬಂದರೆ ಮುಖದ ಸೌಂದರ್ಯವನ್ನು ಹಾಳು ಮಾಡುತ್ತದೆ. ಇದಕ್ಕೆ ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯುತ್ತಾರೆ. ಮಹಿಳೆಯರ ಮುಖದಲ್ಲಿ ಬಯಸದೆ ಬರುವ ಒಂದು ಚರ್ಮದ ವ್ಯಾದಿ ಎನ್ನಬಹುದು ,ಚರ್ಮದಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾದಂತೆಲ್ಲಾ ಈ ಕಲೆಗಳು ಕೆನ್ನೆ, ಹಣೆ, ಮೂಗಿನ ಮೇಲೆ ಮೂಡುತ್ತದೆ. ಈ ಹೈಪರ್ ಪಿಗ್ಮೆಂಟೇಶನ್ ಅಥವಾ ಬಂಗಿಗೆ ಹಲವಾರು ಕಾರಣಗಳಿದೆ ಮುಖ್ಯವಾಗಿ ಹಾರ್ಮೋನಲ್ ಬದಲಾವಣೆಗಳು ಮುಖದ ಮೇಲೆ ಬಂಗು ಬರಲು ಕಾರಣವಾಗುತ್ತದೆ.
ಹಾಗಾದರೆ ಮನೆಯಲ್ಲಿ ಪಿಗ್ಮೆಂಟೇಶನ್ ಚಿಕಿತ್ಸೆ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ :
ಮೊದಲಿಗೆ ನೀವು ಹಾರ್ಮೋನ್ ಬ್ಯಾಲೆನ್ಸ್ ಮಾಡಬೇಕು ಎಂದರೆ, ಫಾಸ್ಟ್ ಫುಡ್ ,ಜಂಕ್ ಫುಡ್ ,ಆಯಿಲ್ ಫುಡ್ ,ಬೇಕರಿ ಪದಾರ್ಥಗಳ ಸೇವನೆ ನಿಲ್ಲಿಸಬೇಕು ,preservative ಜ್ಯೂಸು ಗಳನ್ನೂ ಕುಡಿಯ ಬಾರದು ,ಹಾಗು ತಡವಾಗಿ ಆಹಾರ ಸೇವನೆ ಹಾಗು ರಾತ್ರಿ ತಡವಾಗಿ ಮಲಗುವ ಅಭ್ಯಾಸ ಇರಬಾರದು ಹಾಗು ,ಧೂಮಪಾನ, ಮದ್ಯಪಾನ ,ತಂಬಾಕು ,ಇವುಗಳಿಂದ ದೊರವಿರಬೇಕು .ಟಿ ,ಕಾಫಿ ಹಾಗು ಆಹಾರವನ್ನು ಮಿತವಾಗಿ ಸೇವನೆ ಮಾಡಬೇಕು ಹೆಚ್ಚು ಕಾರ ,ಮಸಾಲೆ ಇರುವಂತಹ ಆಹಾರವನ್ನು ಸೇವನೆ ಮಾಡಬಾರದು ,ಪಿತ್ತವನ್ನು ಉಂಟು ಮಾಡುವಂತಹ ಆಲೂಗಡ್ಡೆ ಹಸಿ ಮೆಣಸಿನ ಕಾಯಿ ,ಬದನೆಕಾಯಿಯನ್ನು ತಿನ್ನಬಾರದು ,ಸಮಯಕ್ಕೆ ಸರಿಯಾಗಿ ಊಟವನ್ನು ಮಾಡಬೇಕು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ಈ ಸಮಸ್ಯೆ ನಿಮ್ಮ ಹತ್ತಿರಾನೂ ಬರುವುದಿಲ್ಲ , ಆದರೆ ಈಗಾಗಲೇ ಬಂದಿದೆ ಎಂದರೆ ಈ ಅವ್ಯಾಸಗಳ ಜೊತೆಗೆ ನಾವು ಹೇಳುವ ಈ ಟಿಪ್ಸ್ ಅನ್ನು ಅನುಸರಿಸಿ .
ಕಕ್ಕೆ ಮರದ ಹೂವನ್ನು ತೆಗೆದು ಕೊಂಡು ನೆರಳಲ್ಲಿ ಒಣಗಿಸಬೇಕು ನಂತರ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು ,ಸ್ವಲ್ಪ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಕ್ಸ್ ಮಾಡಿ ಬಂಗು ಇರುವ ಜಾಗದಲ್ಲಿ ಹಚ್ಚಿಕೊಂಡು ಡ್ರೈ ಆಗುವ ವರೆಗೂ ಬಿಟ್ಟು ತಣ್ಣನೆ ನೀರಿನಿಂದ ಮುಖವನ್ನು ತೊಳೆದು ಕೊಳ್ಳಬೇಕು ಇದು ಕಳೆದುಹೋದ ನಿಮ್ಮ ಕಾಂತಿಯನ್ನು ಹೆಚ್ಚಿಸುತ್ತದೆ . ಹೀಗೆ ಪ್ರತಿದಿನ ಸತತವಾಗಿ ೨೧ದಿನ ಮಾಡಿದರೆ ನಿಮ್ಮ ಸಮಸ್ಯೆ ಖಂಡಿತ ಪರಿಹಾರ ವಾಗುತ್ತದೆ .