ಮೆಕ್ಕಾದಲ್ಲಿ ಬಿಸಿಗಾಳಿ: 550 ಯಾತ್ರಿಗಳು ಸಾವು

ಸೌದು ಅರೇಬಿಯಾದಲ್ಲಿ ತೀವ್ರ ಬಿಸಿ ಗಾಳಿ ಬೀಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಮೆಕ್ಕಾ ಯಾತ್ರೆಗೆ ತೆರಳಿದ್ದ ಸುಮಾರು 550 ಯಾತ್ರಿಗಳು ಮೃತಪಟ್ಟಿದ್ದಾರೆ. ಮೆಕ್ಕಾದಲ್ಲಿ 51.8 ಡಿಗ್ರೆ ಸೆಲ್ಸಿಯಸ್ ತಾಪಮಾನ ಇದೆ.

ಮೃತಪಟ್ಟವರಲ್ಲಿ ಈಜಿಪ್ಟ್​​ನ 232 ಯಾತ್ರಿಗಳು ಹಾಗೂ ಜೋರ್ಡಾನ್ ದೇಶಕ್ಕೆ ಸೇರಿದ 60 ಜನರು ಮೃತಪಟ್ಟಿದ್ದಾರೆ. ಇದರದಲ್ಲಿ ಬಹುತೇಕ ಬಿಸಿ ಗಾಳಿಯಿಂದ ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ನೂಕುನುಗ್ಗಲಿನಿಂದ ಮೃತಪಟ್ಟಿದ್ದಾರೆ. ಸಾವನ್ನಪ್ಪಿದ ತನ್ನ ದೇಶದ ನಾಗರಿಕರ ಪತ್ತೆಗೆ ಸೌದಿ ಅಧಿಕಾರಿಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಈಜಿಪ್ಟ್​ನ ವಿದೇಶಾಂಗ ಇಲಾಖೆ ತಿಳಿಸಿದೆ.

ಕಳೆದ ವರ್ಷ ವಿವಿಧ ಕಾರಣಗಳಿಂದ 240 ಯಾತ್ರಿಗಳು ಮೆಕ್ಕಾದಲ್ಲಿ ಮೃತಪಟ್ಟಿದ್ದರು. ಇವರಲ್ಲಿ ಬಹುತೇಕರು ಇಂಡೊನೇಷ್ಯಾದವರಾಗಿದ್ದರು.

About The Author