Thane News: ಮೊದಲೆಲ್ಲ ಜ್ಯೂಸ್, ಶರ್ಬತ್ ಎಲ್ಲ 30 ರೂಪಾಯಿಯೊಳಗೇ ಸಿಗುತ್ತಿತ್ತು. ಆದರೆ ಈಗ ಜ್ಯೂಸ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಜ್ಯೂಸ್ ರೇಟ್ ಶುರುವಾಗೋದೇ 30 ರೂಪಾಯಿಯಿಂದ. ಬಳಿಕ ಹಾಗೆ ರೇಟ್ ಹೆಚ್ಚುತ್ತ ಹೋಗಿ, 200, 300ಕ್ಕೆ ತಲುಪುತ್ತದೆ. ಆದರೆ ಮಾಮೂಲಿ ಹೊಟೇಲ್‌ನಲ್ಲಿ ನೀವು ಕುಡಿಯುವ ಜ್ಯೂಸ್‌ಗೆ ಬಳಸಲಾದ ಪ್ಲಾಸ್ಟಿಕ್ ಲೋಟಕ್ಕೂ ದುಡ್ಡು ತೊಕೊಂಡ್ರೆ ಹೇಗಿರತ್ತೆ..?
ಇದು ನಿಜವಾಗಿಯೂ ನಡೆದ ಘಟನೆ. ಥಾಣೆಯ ವಿವಿ ಮಾಲ್‌ನಲ್ಲಿ ಶಾಹಿ ದರ್ಬಾರ್ ಎಂಬ ಹೊಟೇಲ್‌ನಲ್ಲಿ ಕುಡಿದು ಬಿಸಾಡುವ ಪ್ಲಾಸ್ಟಿಕ್ ಲೋಟಕ್ಕೆ 40 ರೂಪಾಯಿ ಬಿಲ್ ಮಾಡಲಾಗಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಮುಂಬೈ ದುಬಾರಿ ಎಂದು ಗೊತ್ತಿತ್ತು. ಆದರೆ ಇಷ್ಟು ದುಬಾರಿ ಎಂದು ಗೊತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
Who the hell charges 40₹ for disposable plastic glasses to drink Mango juice in!
I knew Mumbai is expensive but this is ridiculous. pic.twitter.com/G1kPouHJCy
— Ravi Handa (@ravihanda) November 4, 2024