Friday, July 25, 2025

Latest Posts

ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಅಭಿಯಾನಕ್ಕೆ ಚಾಲನೆ

- Advertisement -

www.karnatakatv.net : ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ಪ್ಲಾಸ್ಟಿಕ್ ಮುಕ್ತ ಮಹದೇಶ್ವರ ಬೆಟ್ಟ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಹೊರಾಂಗಣದಲ್ಲಿ  ಸುರಪನೇನಿ ವಿದ್ಯಾಸಾಗರ್ ಫೌಂಡೇಷನ್ ಅವರ ಮುಂದಾಳತ್ವದಲ್ಲಿ ಪ್ರಾಧಿಕಾರದ ಸಹಯೋಗದೊಂದಿಗೆ, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಅಭಿಯಾನ ನಡೆಯಲಿದ್ದು, ಏಕಕಾಲದಲ್ಲಿ 13 ತಂಡಗಳು ಪ್ರಾಧಿಕಾರದ  ವಿವಿಧ  ಮಾಸ್ಟರ್ ಪ್ಲಾನ್ ಏರಿಯಾದೊಳಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಿವೆ.

ಮಲೆ ಮಹದೇಶ್ವರ ಬೆಟ್ಟದ ಎಲ್ಲ ಅಂಗಡಿಗಳು,  ಇತರೇ ವ್ಯಾಪಾರಸ್ಥರಿಗೆ, ಸ್ಥಳೀಯರಿಗೆ ಅರಿವು ಮೂಡಿಸುವ ಕಾರ್ಯಾಗಾರವೂ ನಡೆಯಲಿದೆ.

ಕರ್ನಾಟಕ ಟಿವಿ ಚಾಮರಾಜನಗರ

- Advertisement -

Latest Posts

Don't Miss