Banglore News : ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಬಿಬಿಎಂಪಿ ಮಾರ್ಷಲ್‌ಗಳು ದಾಳಿ ನಡೆಸುತ್ತಲೇ ಇದ್ದಾರೆ. ಆದರೂ ಪಾಸ್ಟಿಕ್ ಬಳಕೆಯ ಮಾಫಿಯಾಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ. ದಾಳಿಗಳು ಕೂಡ ದಂಡಕ್ಕೆ ಸೀಮಿತವಾಗಿಯೇ ಉಳಿದುಕೊಂಡಿದೆ. ಆದ್ರಿಂದ ಏಕ ಬಳಕೆ ಪ್ಲಾಸ್ಟಿಕ್ ಹಾವಳಿ ದ್ವಿಗುಣವಾಗುತ್ತಲೇ ಇದೆ.
ದಾಳಿಯ ವೇಳೆ ನಿಂದನೆ, ಅಪಮಾನ ಸಾಮಾನ್ಯ. ಆದರೂ ಅವುಗಳನ್ನು ಸಹಿಸಿಕೊಂಡು ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಮಾರ್ಷಲ್ಗಳದ್ದು. ಆದರೆ ಕೆಲವು ದಾಳಿ ಸಂದರ್ಭಗಳಲ್ಲಿ ಪ್ರಾಣ ಬೆದರಿಕೆ ಎದುರಿಸಿದ್ದು ಇದೆ. ಕೆಲವು ಸಲ ಕಿರಾಣಿ ಅಂಗಡಿ, ಹೋಟೆಲ್, ತರಕಾರಿ, ಮಾಂಸದ ಅಂಗಡಿಗಳ ಮೇಲೆ ಮಾರ್ಷಲ್‌ಗಳು ದಾಳಿ ನಡೆಸಿದಾಗ ದೊಡ್ಡ ಮೊತ್ತದ ದಂಡ ವಿಧಿಸ್ತಾರೆ. ಆದರೆ, ಕೆಲವೊಮ್ಮೆ ರಾಜಕೀಯ ಮುಖಂಡರು ಮಾರಾಟಗಾರರ ನೆರವಿಗೆ ಬಂದು ಸಣ್ಣ ಮೊತ್ತದ ದಂಡ ಹಾಕಿಸ್ತಾರೆ.
ಕಳೆದ 21 ದಿನಗಳಲ್ಲಿ 1,317 ಕೆಜಿ. ಪ್ಲಾಸ್ಟಿಕ್ ಜಪ್ತಿ ಮಾಡಿದ್ದು, 15 ಲಕ್ಷ ದಂಡ ವಸೂಲಿ ಮಾಡಿದ್ದಾರೆ. ಅಂದರೆ ಬೆಂಗಳೂರಂಥ ದೊಡ್ಡ ನಗರದಲ್ಲಿ ದಿನಕ್ಕೆ ಸರಾಸರಿ 62 ಕೆಜಿ ಪ್ಲಾಸ್ಟಿಕ್ ಮಾತ್ರ ಜಪ್ತಿ ಮಾಡಿದಂತಾಗಿದೆ. ಹೀಗಾಗಿ ನಗರದಲ್ಲಿ ನಡೆಯುತ್ತಿರುವ ಪ್ಲಾಸ್ಟಿಕ್ ಮಾಫಿಯಾ ಹೆಡೆಮುರಿ ಕಟ್ಟಲು ಪ್ರತ್ಯೇಕ ದಳ ಅಗತ್ಯವಿದೆ.
Ashtemida Aisira : ಸೆ.24 ಭಾನುವಾರ ಬೆಂಗಳೂರಿನಲ್ಲಿ ತುಳುನಾಡ ಅಷ್ಟೆಮಿದ ಐಸಿರ
Nanu Nandini : ಬ್ರೇಕ್ ಇಲ್ಲದೆ ಸಾಗುತ್ತಿದೆ ನಾನು ನಂದಿನಿ ಹಾಡಿನ ವೀಕ್ಷಣೆ : 30 ಮಿಲಿಯನ್ ವೀವ್ಸ್