Saturday, July 5, 2025

Latest Posts

ಪ್ಲಾಸ್ಟಿಕ್ ಮುಕ್ತ ಹಾಸನ ನಗರಕ್ಕೆ ನಗರಸಭೆ ಅಧ್ಯಕ್ಷ ಆರ್. ಮೋಹನ್ ಕರೆ : ಬೀದಿ ನಾಟಕದ ಮೂಲಕ ಜಾಗೃತಿ

- Advertisement -

ಹಾಸನ:  ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಬೇಕಾದರೆ ಯಾರೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಜೊತೆಗೆ ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಕಸವಿಲೇವಾರಿ ಮಾಡುವ ವಾಹನಕ್ಕೆ ಹಾಕಬೇಕು. ಈ ಮೂಲಕ ಪ್ಲಾಸ್ಟಿಕ್ ಮುಕ್ತ ಹಾಸನ ನಗರ ಮಾಡಲು ಎಲ್ಲರೂ ಕೈಜೋಡಿಸುವಂತೆ ನಗರಸಬೆ ಅಧ್ಯಕ್ಷರಾದ ಆರ್. ಮೋಹನ್ ಕರೆ ನೀಡಿದರು. ನಗರದ ಮಹಾವೀರ ವೃತ್ತದಲ್ಲಿ ಜಿಲ್ಲಾಡಳಿತ, ನಗರಸಭೆ ಹಾಗೂ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಆಂದೋಲನ-2022 ಬೀದಿ ನಾಟಕ ಪ್ರದರ್ಶನವನ್ನು ಹಸಿರು ಭಾವುಟ ಪ್ರದರ್ಶಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಹಾಸನ ನಗರವನ್ನಾಗಿ ಮಾಡಲು ಮುಂದಾಗಿದ್ದು, ಯಾರು ಕೂಡ ಪ್ಲಾಸ್ಟಿಕ್ ಬಳಕೆ ಮಾಡದೇ ಬಟ್ಟೆ ಕೈಚೀಲವನ್ನು ಉಪಾಯೋಗಿಸುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.

ಸೆಲ್ಫಿ ತೆಗೆದುಕೊಳ್ಳುವಾಗ ತಲಪಾತಕ್ಕೆ ಬಿದ್ದು ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲು

ಕರ್ನಾಟಕ ಸರ್ಕಾರ 2021ರಲ್ಲಿ ಪ್ಲಾಸ್ಟಿಕ್ ನ್ನು ಬ್ಯಾನ್ ಮಾಡಿದೆ. ಇದರ ಉದ್ದೇಶ ಪರಿಸರವನ್ನು ನಾಶ ಮಾಡದೇ ಕಾಪಾಡುವುದಾಗಿದೆ. ಜೊತೆಗೆ ಘನತ್ಯಾಜ್ಯ ವಸ್ತುಗಳಿಂದಲೂ ಕೂಡ ಪರಿಸರ ಕಲುಷಿತವಾಗುತ್ತಿದೆ. ಎಲ್ಲೆಂದರಲ್ಲಿ ಕಸವನ್ನು ರಸ್ತೆಗೆ ಎಸೆಯದೆ ನಗರಸಭೆಯ ಅಫೆ ವಾಹನಕ್ಕೆ ಕಸವನ್ನು ಹಾಕಬೇಕು. ಸಾರ್ವಜನಿಕರು ಕೂಡ ಜಾಗೃತಗೊಂಡು ನಿಯಮದಂತೆ ಕಸ ವಿಲೇವಾರಿ ಮಾಡಿ ನಿಗಧಿತ ಸ್ಥಳದ ಕಡೆಗೆ ಹಾಕಿದರೆ ಒಳ್ಳೆಯದು ಎಂದರು. ಪರಿಸರ ಸಂರಕ್ಷಣೆಗೆ ಸಂಸ್ಥೆಯೊಂದರಿಂದ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯವಾಗುತ್ತದೆ. ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಇಂದಿನಿಂದಲೇ ಪಣತೊಟ್ಟ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾಲೀನ್ಯ ನಿಯಂತ್ರಣ ಮಂಡಳಿಯ ಕೀರ್ತಿಕುಮಾರ್, ಕೆ. ರವಿಚಂದ್ರ, ಹಿರಿಯ ಕಲಾವಿದ ಬಿ.ಟಿ. ಮಾನವ ಹಾಗೂ ನಗರಸಭೆ ಆರೋಗ್ಯಾಧಿಕಾರಿಗಳು ಭಾಗಿಯಾಗಿದ್ದರು.

ಬಾಲಿವುಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬನಾರಸ್ ಹೀರೋ..!

ರೆಡಿ ಆನ್ ವ್ಹೀಲ್ಸ್ ಅಪ್ಲಿಕೇಶನ್ (ROW )ಲೋಕಾರ್ಪಣೆ ಮಾಡಿದ ಧ್ರುವ ಸರ್ಜಾ

- Advertisement -

Latest Posts

Don't Miss