ನಮ್ಮ ದೇಶದ ಲಕ್ಷಾಂತರ ರೈತರಿಗೆ ಖುಷಿಯ ಸುದ್ದಿಯೊಂದಿದೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತು ಈಗ ಬಿಡುಗಡೆ ಆಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ 2025 ಜುಲೈನಲ್ಲಿ ಈ ಕಂತನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ₹20,500 ಕೋಟಿಗಳ ಮೊತ್ತವನ್ನು 9.7 ಕೋಟಿ ರೈತರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ.
ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರಿಗೆ ವರ್ಷಕ್ಕೆ ₹6,000 ನೆರವಾಗುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ಪಾವತಿಸಲಾಗುತ್ತದೆ – ಪ್ರತಿ ನಾಲ್ಕು ತಿಂಗಳಿಗೆ ₹2,000. ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು, eKYC ಕಡ್ಡಾಯವಾಗಿದೆ. OTP ಆಧಾರಿತ eKYC ಅನ್ನು PM-Kisan ಪೋರ್ಟಲ್‌ನಲ್ಲಿ ಮಾಡಬಹುದು. ಬಯೋಮೆಟ್ರಿಕ್ ಆಧಾರಿತ eKYC ಗಾಗಿ, ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ (CSC) ಭೇಟಿ ನೀಡಬಹುದಾಗಿದೆ.
20ನೇ ಕಂತು ಖಾತೆಗೆ ಬಂದಿದೆ ಅಂತ ಹೇಗೆ ಚೆಕ್ ಮಾಡುವುದು?
ಅಧಿಕೃತ PM-Kisan ವೆಬ್‌ಸೈಟ್‌ಗೆ ಹೋಗಿ, ಫಲಾನುಭವಿಗಳ ಸ್ಥಿತಿ ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಅಥವಾ ಖಾತೆ ಸಂಖ್ಯೆಯನ್ನು ನಮೂದಿಸಿ, ‘ಡೇಟಾ ಪಡೆಯಿರಿ’ ಮೇಲೆ ಕ್ಲಿಕ್ ಮಾಡಿ, ನಿಮ್ಮ ಪಾವತಿ ಸ್ಥಿತಿ ಪರದೆಯ ಮೇಲೆ ಕಾಣಿಸುತ್ತದೆ.
ವರದಿ : ಲಾವಣ್ಯ ಅನಿಗೋಳ