Thursday, September 19, 2024

Latest Posts

ಈ ಬಾರಿಯ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತಾ..?

- Advertisement -

ನವದೆಹಲಿಯ ಮೀಡಿಯಾ ಸೆಂಟರ್‌ನಲ್ಲಿ ನಡೆದ ಕಲ್ಲಿದ್ದಲು ವಾಣಿಜ್ಯ ಹರಾಜು ಪ್ರಕ್ರಿಯೆಯಲ್ಲಿ, ದೇಶವನ್ನ ಉದ್ದೇಶಿಸಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಆಮದಿಗಿಂತ ರಫ್ತು ಹೆಚ್ಚಾಗಲಿ, ಸ್ವಾವಲಂಬಿ ಭಾರತವಾಗಲಿ ಎಂದು ಕರೆ ನೀಡಿದ್ದಾರೆ.

ನಾವು ಸ್ವಾವಲಂಬಿ ಭಾರತ ನಿರ್ಮಿಸಬಲ್ಲೆವು ಎಂದು ವಿಶ್ವಾಸ ವ್ಯಕ್ತಪಡಿಸಿರುವ ಮೋದಿ, ಕಲ್ಲಿದ್ದಲು ವ್ಯವಹಾರದ ಬಗ್ಗೆ ಮಾತನಾಡಿದರು.

ಭಾರತ ಕೊರೊನಾ ಜೊತೆ ಹೋರಾಡಲಿದೆ, ಮುಂದೆ ಗೆಲುವು ಕೂಡ ಸಾಧಿಸಲಿದೆ, ಮುಂದುವರೆಯಲಿದೆ. ಇಷ್ಟು ದೊಡ್ಡ ಆಪತ್ತನ್ನ, ಆಪತ್ತು ಎಂದು ಅಳುತ್ತ ಕೂರುವ ಜಾಯಮಾನ ಭಾರತದ್ದಲ್ಲ. ಆಪತ್ತು ಎಷ್ಟೇ ದೊಡ್ಡದಿರಲಿ, ಭಾರತವು ಅದನ್ನ ಅವಕಾಶವಾಗಿ ಮಾರ್ಪಾಡು ಮಾಡಿಕೊಂಡು ಮುನ್ನುಗ್ಗುತ್ತದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲ್ಲದೇ, ಕೊರೊನಾದಂಥ ಸಂಕಷ್ಟದ ಸಮಯದಲ್ಲಿ, ಭಾರತವು ಸ್ವಾವಲಂಬಿ ದೇಶವಾಗುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಭಾರತವು ಇನ್ನು ಮುಂದೆ ಆಮದು ಮಾಡಿಕೊಳ್ಳುವುದು ಕಡಿಮೆ ಮಾಡಿಕೊಳ್ಳಬೇಕು. ಅಂತೆಯೇ ರಫ್ತು ಹೆಚ್ಚು ಮಾಡಬೇಕು. ಆಮದಿಗೆ ಕೊಡುವಂಥ ಲಕ್ಷ ಲಕ್ಷ ದುಡ್ಡನ್ನು ಉಳಿಸಿ, ಭಾರತದ ಬಡವರ ಉದ್ಧಾರಕ್ಕಾಗಿ ಶ್ರಮಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ.

ಅಲ್ಲದೇ, ಕಲ್ಲಿದ್ದಲು ಹಗರಣದ ಬಗ್ಗೆ ಇಂಡೈರೆಕ್ಟ್ ಆಗಿ ಚಾಟಿ ಬೀಸಿದ ಪ್ರಧಾನಿ, ಕಲ್ಲಿದ್ದಲು ಕ್ಷೇತ್ರದಲ್ಲಿ 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. 10 ಮಿಲಿಯನ್ ಟನ್ ಕಲ್ಲಿದ್ದಲನ್ನ ಅನಿಲವಾಗಿ ಪರಿವರ್ತಿಸಲಾಗಿದೆ. ಭಾರತದಲ್ಲಿ ಕಲ್ಲಿದ್ದಲಿನ ಭಂಡಾರವೇ ಇದೆ. ಆದ್ರೂ ಕೂಡ ಕಲ್ಲಿದ್ದಲನ್ನ ಆಮದು ಮಾಡಿಕೊಳ್ಳಲಾಗ್ತಿದೆ. ಆದ್ರೆ ಇನ್ನು ಮುಂದೆ ಕಲ್ಲಿದ್ದಲನ್ನ ರಫ್ತು ಮಾಡಲಾಗತ್ತೆ ಎಂದು ಮೋದಿ ಹೇಳಿದ್ದಾರೆ.

ಇನ್ನು ಕಲ್ಲಿದ್ದಲು ಸಚಿವ ಪ್ರಹ್ಲಾಜ್ ಜೋಶಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನರೇಂದ್ರ ಮೋದಿ, ಕಲ್ಲಿದ್ದಲಿನ ಹರಾಜಿನಿಂದ ಲಾಭದಾಯಕವಾಗಿದೆ, ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸಹಜ ಸ್ಥಿತಿಗೆ ಬಂದಿದೆ. ರೈಲು ಸರಕು ಸಾಗಣೆಯಲ್ಲಿ ಶೇ.26ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ.

- Advertisement -

Latest Posts

Don't Miss