ನವದೆಹಲಿ: ದೇಶದಲ್ಲಿ ಕೊರೋನಾ 4ನೇ ಅಲೆಯ ಮುನ್ಸೂಚನೆ ನೀಡಲಾಗಿದೆ. ದೆಹಲಿಯಲ್ಲಿ ಈಗಾಗಲೇ ನಾಲ್ಕನೇ ಅಲೆ ಕಾಲಿಟ್ಟಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಮಹತ್ವದ ಕೋವಿಡ್ ನಿಯಂತ್ರಣ ಸಭೆಯನ್ನು ನಡೆಸಲಿದ್ದಾರೆ. ಜೊತೆಗೆ, ಇಂದೇ ಕಠಿಣ ನಿಯಮಗಳನ್ನು ಜಾರಿಗೊಳಿಸೋ ಸೂಚನೆ ಕೂಡ ನೀಡಲಿದ್ದಾರೆ ಎನ್ನಲಾಗಿದೆ.
ಕೊರೋನಾ ನಿಯಂತ್ರಣಕ್ಕಾಗಿ ಮಹತ್ವದ ಕ್ರಮ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು, ಕೆಲವೇ ಕ್ಷಣಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ, ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಹಲವು ಚರ್ಚೆಯನ್ನು ಮಾಡಲಿದ್ದಾರೆ ಎನ್ನಲಾಗಿದೆ.
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವಂತ ಕೋವಿಡ್ ಕಂಟ್ರೋಲ್ ಗಾಗಿ ಎಲ್ಲಾ ಸಿಎಂ ಜೊತೆಗೆ ಪಿಎಂ ಚರ್ಚೆ ಬಳಿಕ, ಕೊರೋನಾ ಬ್ರೇಕ್ ಗೆ ಮಹತ್ವದ ನಿರ್ಧಾರವನ್ನು ಕೂಡ ಮೋದಿ ಪ್ರಕಟಿಸೋ ಸಾಧ್ಯತೆ ಇದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸಭೆ ಆರಂಭಗೊಳ್ಳಲಿದ್ದು, ಆ ಬಳಿಕ ಖಚಿತ ನಿರ್ಧಾರ ಹೊರ ಬೀಳಲಿದೆ.




