Sunday, October 13, 2024

Latest Posts

ಪ್ರಧಾನಿ ಮೋದಿ ಹೊಸ ಲೆಕ್ಕಾಚಾರ…!

- Advertisement -

ಚುನಾವಣೆ ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಅಂಗ. ಆಯಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಇದೇ ಚುನಾವಣೆ ದೇಶದ ಅಭಿವೃದ್ಧಿಗೆ ಮಾರಕ ಅನ್ನೋದು ಅಷ್ಟೇ ಸತ್ಯ. ಇದಕ್ಕಾಗಿ ಪ್ರಧಾನಿ ಮೋದಿ ಇದೀಗ ಹೊಸದೊಂದು ನಿರ್ಧಾರಕ್ಕೆ ಮುಂದಾಗಿದ್ದಾರೆ.

ಮಾರ್ಚ್ ನಿಂದ ಮೇ ತಿಂಗಳ ವರೆಗೆ ದೇಶದಲ್ಲಿ ನಡೆದ 7 ಹಂತಗಳಲ್ಲಿ ನಡೆದ 7 ಹಂತಗಳ ಚುನಾವಣೆಯಲ್ಲಿ ಹಲವರು ಸೋಲುಂಡರೆ, ಕೆಲವರು ಗೆದ್ದು ಬಿಗಿದ್ರು. ಆದ್ರೆ ಈ 3 ತಿಂಗಳ ಕಾಲ ನೀತಿ ಸಂಹಿತೆ ಜಾರಿಯಲ್ಲಿದ್ದಿದ್ರಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡಲು ಸಾಧ್ಯವಾಗಲಿಲ್ಲ. ಇನ್ನು ಲೋಕಸಭಾ ಚುನಾವಣೆಗೆ ಸಾವಿರಾರು ಕೋಟಿ ಹಣವನ್ನ ಚುನಾವಣಾ ಆಯೋಗ ಖರ್ಚು ಮಾಡಿದೆ. ಇನ್ನು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಸರಾಸರಿ ಒಂದು ಕ್ಷೇತ್ರದಲ್ಲಿ 10 ರಿಂದ 20 ಕೋಟಿ ಖರ್ಚು ಮಾಡಿದ್ದಾರೆ. ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಕ್ಷೇತ್ರದಲ್ಲಿ ದೋಸ್ತಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಇಬ್ಬರಿಂದಲೇ 200 ಕೋಟಿಗೂ ಅಧಿಕ ಹಣ ಚಲಾವಣಯಾಗಿದೆಯಂತೆ. ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ 5 ಸಾವಿರ ಕೋಟಿಗೂ ಅಧಿಕ ಹಣ ಚಲಾವಣೆಯಾಗಿದೆ.

ಆದ್ರೆ ಹೀಗೆ ಪದೇ ಪದೇ ಚುನಾವಣೆ ನಡೆಯೋದ್ರಿಂದ ಆಯಾ ಪ್ರದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಇದಕ್ಕೆ ಕಡಿವಾಣ ಹಾಕೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ ನಿರ್ಧಾರವೊಂದಕ್ಕೆ ಮುಂದಾಗಿದ್ದಾರೆ. ಒಂದು ದೇಶ ಒಂದು ಚುನಾವಣೆ ನಡೆಸಬೇಕು ಎನ್ನುವ ಬಿಜೆಪಿಯ ಕಳೆದ ಬಾರಿಯ ಲೆಕ್ಕಾಚಾರವನ್ನ ಮೋದಿ ಮತ್ತೆ ಪ್ರಸ್ತಾಪ ಮಾಡಿದ್ದು, ಈ ಕುರಿತಂತೆ ಜೂನ್ 19ರಂದು ಎಲ್ಲಾ ಪಕ್ಷಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ ಈಗ ಚರ್ಚೆಗೆ ಈಗಾಗಲೇ ನಾಂದಿ ಹಾಡಿರುವ ಮೋದಿ, ಮುಂದಿನ 2024ರ ಚುನಾವಣೆ ವೇಳೆ ‘ಒಂದು ದೇಶ ಒಂದು ಚುನಾವಣೆ’ ಜಾರಿ ಮಾಡುವ ಸಾಧ್ಯತೆ ಇದ್ದು ದೇಶದ ಅಭಿವೃದ್ಧಿಗೆ ಎದುರಾಗೋ ತೊಡಕುಗಳನ್ನು ಮೋದಿ ನಿವಾರಸಿಲು ಮುಂದಾಗಿದ್ದಾರೆ.

ವಿದ್ಯಾರ್ಥಿಗಳಿಗೆ ಸಿಎಂ ಬಂಪರ್ ಗಿಫ್ಟ್!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=f6pyRkNFzjQ
- Advertisement -

Latest Posts

Don't Miss