ಭಾರತೀಯ ವಾಣಿಜ್ಯ ಮಂಡಳಿಯ 95 ನೇ ವಾರ್ಷಿಕ ಸಮಗ್ರ ಅಧಿವೇಶನದ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳೋಣ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್‌ನ 95 ನೇ ವಾರ್ಷಿಕ ಸಮಗ್ರ ಅಧಿವೇಶನದ ಉದ್ಘಾಟನಾ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಳೆದ ಐದಾರು ವರ್ಷಗಳಿಂದ ಪೀಪಲ್, ಪ್ಲಾನೆಟ್, ಪ್ರಾಫಿಟ್ ಕಾನ್ಸೆಪ್ಟ್ ಹೆಚ್ಚು ಲಾಭಕರವಾಗಿದೆ ಎಂದಿದ್ದಾರೆ.

ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕೆಂಬ ಅಭಿಯಾನ ನಡೆಯುತ್ತಿದೆ. ಇದರಲ್ಲಿ ಪೀಪಲ್, ಪ್ಲಾನೆಟ್, ಪ್ರಾಫಿಟ್ ಕಾನ್ಸೆಪ್ಟ್ ಕಂಡುಬಂದಿದೆ. ಜನ ಪ್ಲಾಸ್ಟಿಕ್ ಬದಲು ಹೊಸ ಹೊಸ ತರಹದ ಪರ್ಸ್, ಬ್ಯಾಗ್ ಬಳಸುತ್ತಿದ್ದಾರೆ. ಇಲ್ಲಿ ಪೀಪಲ್ ಅಂದ್ರೆ ಜನರಿಗೂ ಲಾಭವಾಗಿದೆ. ಪ್ಲಾನೆಟ್‌ಗೂ ಹಾನಿಕಾರಕವಾಗುವ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಹೊಸ ರೀತಿಯ ಬ್ಯಾಗ್ ತಯಾರಕರಿಗೆ ಲಾಭವೂ ಆಗಿದೆ. ಹೀಗಾಗಿ ಪೀಪಲ್, ಪ್ಲಾನೆಟ್, ಪ್ರಾಫಿಟ್ ಕಾನ್ಸೆಪ್ಟ್ ಒಳ್ಳೆಯ ಕಾನ್ಸೆಪ್ಟ್ ಆಗಿ ಮಾರ್ಪಾಡಾಗಿದೆ ಎಂದರು.
ಅಲ್ಲದೇ, ಕೊರೊನಾ ವೇಳೆಯನ್ನ ಒಳ್ಳೆಯ ಕೆಲಸಕ್ಕೆ ಬಳಸಿಕೊಂಡು ಸ್ವಾವಲಂಬಿಗಳಾಗೋಣ ಎಂದು ಪ್ರಧಾನಿ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ.

