www.karnatakatv.net: ಇಂದು ನಡೆಯಲಿರುವ ಜಿ20 ಶೃಂಗಸಭೆ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮಾತನಾಡಲಿದ್ದಾರೆ. ಹಾಗೇ ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಅಲ್ಲಿರುವ ಭಾರತೀಯ ಮೂಲದವರ ಜತೆ ಸಂವಾದದಲ್ಲಿ ಪಾಲ್ಗೊಂಡರು.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಮ್ ನಲ್ಲಿರುವ ಭಾರತೀಯವರು ಶಿವ ತಾಂಡವ ಸ್ತೋತ್ರ ಪಠಿಸುವ ಮೂಲಕ ಸ್ವಾಗತಿಸಿದ್ದರು. ಅದಾದ ಮೇಲೆ ಗಾಂಧಿಗೆ ಗೌರವ ಸಲ್ಲಿಸುವ ವೇಳೆ ನೆರೆದಿದ್ದ ಭಾರತೀಯ ಮೂಲದ ಜನರು, ಮೋದಿಯವರ ಬಳಿ ಗುಜರಾತಿ ಭಾಷೆಯಲ್ಲಿ ‘ನರೇಂದ್ರ ಭಾಯ್ ಕೆಮ್ ಚೋ’ ಎಂದು ಕೇಳಿದ್ದಾರೆ. ಅಂದರೆ ಹೇಗಿದ್ದೀರಿ ಎಂದು ಅರ್ಥ. ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪ್ರತಿಯಾಗಿ ಗುಜರಾತಿ ಭಾಷೆಯಲ್ಲೇ ಉತ್ತರ ನೀಡಿದ್ದು, ಮಾಜಾ ಮಾಚೋ ಎಂದು ನಗುತ್ತ ಹೇಳಿದ್ದಾರೆ.
ಯುವತಿ ಮತ್ತಿಬ್ಬರು ಸೇರಿ ಸ್ತ್ರೋತ್ರ ಹೇಳುವಷ್ಟೂ ಹೊತ್ತು ಪ್ರಧಾನಿ ಕೈ ಮುಗಿದು ನಿಲ್ಲುತ್ತಾರೆ. ಕೊನೆಯಲ್ಲಿ ಓಂ ನಮಃ ಶಿವಾಯ ಎಂದು ಯುವತಿಯೊಟ್ಟಿಗೆ ಇವರೂ ಧ್ವನಿಗೂಡಿಸುತ್ತಾರೆ. ಅದಾದ ಬಳಿಕ ಮಹಿಳೆಯೊಬ್ಬರು ಕೇಮ್ ಚೋ ಎಂದು ಪ್ರಶ್ನಿಸುತ್ತಾರೆ. ಆಗ ಮಜಾ ಮಾ ಎಂದು ಪ್ರಧಾನಿ ಉತ್ತರಿಸುತ್ತಾರೆ. ಅಲ್ಲಿರುವವರೆಲ್ಲ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುತ್ತಿದ್ದರು. ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಬಳಿಕ ಪ್ರಧಾನಿ ಮೋದಿ ವ್ಯಾಟಿಕನ್ ಸಿಟಿಗೆ ಭೇಟಿಕೊಡಲಿದ್ದಾರೆ. ಪೋಪ್ ಫ್ರಾನ್ಸಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ರನ್ನು ಭೇಟಿ ಮಾಡುವರು. ಇಟಲಿಗೆ ಹೋಗುವ ಪೂರ್ವದಲ್ಲಿ ಮಾತನಾಡಿದ್ದ ಅವರು, ಸದ್ಯದ ಜಾಗತಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಜಿ20 ಶೃಂಗಸಭೆ ನಮಗೆ ವೇದಿಕೆಯಾಗಿದೆ. ಹಾಗೇ, ಆರ್ಥಿಕ ಸಬಲೀಕರಣ, ಸಾಂಕ್ರಾಮಿಕದಿAದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು, ಸ್ಥಿತಿಸ್ಥಾಪಕತ್ವ ಅಭಿವೃದ್ಧಿ ಸ್ಥಾಪಿಸಲು ಜಿ20 ಹೇಗೆ ಎಂಜಿನ್ ಆಗಬಹುದು ಎಂಬುದನ್ನು ನಾವು ಚರ್ಚಿಸಲಿದ್ದೇವೆ ಎಂದು ಹೇಳಿದ್ದರು.




