www.karnatakatv.net: ಜಿ20 ಶೃಂಗಸಭೆಗಾಗಿ ಮೋದಿ ರೋಮ್ ಗೆ ತೆರಳಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ರೋಮ್ ಗೆ ಭೇಟಿಕೊಡುತ್ತಿದ್ದಾರೆ.
ಕಳೆದ 12 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ರೋಮ್ ಗೆ ಭೇಟಿ ನೀಡುತ್ತಿರುವುದು ವಿಶೇಷ ವಾಗಿದೆ. ನರೇಂದ್ರ ಮೋದಿಯವರು ರೋಮ್ ಗೆ ಭೇಟಿ ನೀಡುವ ಬಗ್ಗೆ ಇಟಲಿಯಲ್ಲಿರುವ ಭಾರತದ ರಾಯಭಾರಿ ನೀನಾ ಮಲ್ಹೋತ್ರಾ ಕೂಡ ಖಚಿತ ಪಡಿಸಿದ್ದರು. ಇಂದು ಸಂಜೆ 5.30ಕ್ಕೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಗಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮೋದಿ ಅ.31 ರವರೆಗೆ ಅಲ್ಲಿಯೇ ಇರಲಿದ್ದು, ಈ ವೇಳೆ ವ್ಯಾಟಿಕನ್ ನಗರಕ್ಕೂ ಭೇಟಿ ನೀಡುವರು. ನಂತರ ಅಲ್ಲಿಂದ ಯುಕೆ ಗೆ ತೆರಳುವರು. ಇನ್ನು ರೋಮ್ ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅವರು, ಕೊರೊನಾ ಸಾಂಕ್ರಾಮಿಕದಿoದ ಆರೋಗ್ಯ ಚೇತರಿಕೆ ಮತ್ತು ಜಾಗತಿಕ ಆರ್ಥಿಕತೆ ಚೇತರಿಕೆ ಕಾಣುತ್ತಿರುವ ಬಗ್ಗೆ ಮಾತನಾಡಲಿದ್ದಾರೆ. ನಂತರ ಯುಕೆಯ ಗ್ಲಾಸ್ಗೋದಲ್ಲಿ, ಹವಾಮಾನ ವೈಪರಿತ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯತೆಯ ಬಗ್ಗೆ ಸಮಗ್ರವಾಗಿ ಮಾತನಾಡಲಿದ್ದಾರೆ.