Thursday, September 25, 2025

Latest Posts

ಪೋಕ್ಸೊ ಕಾಯ್ದೆ: ವಯಸ್ಸಿನ ಮಾನದಂಡ ಪರಿಶೀಲನೆಗೆ ಹೈಕೋರ್ಟ್ ನಿರ್ದೇಶನ

- Advertisement -

ಬೆಂಗಳೂರು: 16 ವರ್ಷ ದಾಟಿದ ಬಾಲಕಿಯರ ಪ್ರೇಮ ಪ್ರಕರಣಗಳು ಹೆಚ್ಚುತ್ತಿದ್ದು, ಬಾಲಕಿಯರ ಲೈಂಗಿಕ ಸಂಪರ್ಕದ ವಯೋಮಿತಿ ಕುರಿತು ಮರು ಪರಿಶೀಲಸಬೇಕು ಎಂದು ಹೈಕೋರ್ಟ್ ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಿದೆ.

ಪೋಕ್ಸೊ ಕಾಯ್ದೆ ಅನುಸಾರ ಲೈಂಗಿಕ ಸಂಪರ್ಕ ಹೊಂದಲು 18 ವರ್ಷ ತುಂಬಿರಬೇಕು. ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದಲೇ ಭಾರತೀಯ ದಂಡ ಸಂಹಿತೆ 1860(ಐಪಿಸಿ) ಹಾಗೂ ಪೋಕ್ಸೊ ಕಾಯ್ದೆ-2012ರ ನಿಯಮಗಳ ಬಗ್ಗೆ ಶಿಕ್ಷಣ ನೀಡಬೇಕು. ಈ ಕಾಯ್ದೆಯ ಉಲ್ಲಂಘನೆಯಾದರೆ ಆಗುವ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಇದರ ಕುರಿತು ಎಲ್ಲಾ ಶಾಲೆಗಳಿಗೆ ಎಚ್ಚರಿಕೆ ನೀಡುವಂತೆ ಸೂಚಿಸಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.

- Advertisement -

Latest Posts

Don't Miss