Thursday, August 7, 2025

Latest Posts

ಪೋಕ್ಸೋ ಕೇಸ್: ಈ ಬಗ್ಗೆ ಮುರುಘಾ ಶ್ರೀಗಳ ಫಸ್ಟ್ ರಿಯಾಕ್ಷನ್ ಏನ್ ಗೊತ್ತಾ.?

- Advertisement -

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧ ಪೋಕ್ಸೋ ಕೇಸ್ ದಾಖಲಾದ ಬಳಿಕ, ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರು ಮೊದಲ ಪ್ರತಿಕ್ರಿಯೆ ಏನ್ ಹೇಳಿದ್ರು ಅಂತ ಮುಂದೆ ಓದಿ..

ಇಂದು ಮುರುಘಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಮುರುಘಾ ಶ್ರೀಗಳು ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವಂತ ಮಠದ ಒಳಗಿನ ಪಿತೂರಿಯಾಗಿದೆ. ಈ ಬಗ್ಗೆ ಯಾರೂ ಆತಂಕ, ಭಯ ಪಡಬಾರದು. ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಪ್ರಕರಣದಿಂದ ಗೆದ್ದು ಬರೋ ವಿಶ್ವಾಸವನ್ನು ವ್ಯಕ್ತ ಪಡಿಸಿದರು.

ಈ ನೆಲದ ಕಾನೂನನ್ನು ಗೌರವಿಸುತ್ತೇವೆ. ಶ್ರೀಮಠವು ಅದಕ್ಕೆ ಹೊರತಾಗಿಲ್ಲ. ಕಾನೂನಿಗೆ ಎಲ್ಲರೂ ತಲೆಬಾಗಲೇ ಬೇಕು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣುವ ನಿಟ್ಟಿನಲ್ಲಿ ಹೋರಾಟ ಮುಂದುವರೆಸಲಾಗುತ್ತದೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳೋಣ ಎಂದರು.

ಕಳಎದ 15 ವರ್ಷಗಳಿಂದಲೂ ಈ ರೀತಿಯ ಪಿತೂರಿಗಳು ನಡೆಯುತ್ತಿವೆ. ನಮ್ಮ ಮಠ ನ್ಯಾಯ ದೇಗುಲವಿದ್ದಂತೆ. ಆದ್ರೇ ಈಗ ಮಠದ ವಿರುದ್ಧವೇ ಷಡ್ಯಂತ್ರ ನಡೆಯುತ್ತಿದೆ. ಯಾರೂ ಕೂಡ ಊಹಾ ಪೋಹಗಳಿಗೆ ಕಿವಿಗೊಡಬಾರದು. ನಾವು ಕೂಡ ನ್ಯಾಯ ಸ್ಥಾನದಲ್ಲಿ ಇದ್ದೇವೆ. ಏನೋ ಒಂದು ಅಹಿತಕರ ಘಟನೆ ನಡೆದಿದೆ. ನಾವು ಅದರಿಂದ ಹೊರಗೆ ಬಂದೇ ಬರುತ್ತೇವೆ ಎಂಬ ವಿಶ್ವಾಸವಿದೆ. ಭಕ್ತರು ಹೆದರುವ ಅಗತ್ಯವಿಲ್ಲ. ನಿಮ್ಮಲ್ಲರ ಬೆಂಬಲದಿಂದ ನಾವು ಧೈರ್ಯದಿಂದ ಇದ್ದೇವೆ ಎಂದು ಹೇಳಿದರು.

- Advertisement -

Latest Posts

Don't Miss