Banasavadi : ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿವಾಹನ ನಿಲುಗಡೆ ವಿಚಾರವಾಗಿ ಬಾಣಸವಾಡಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆದ ಘಟನೆ ನಡೆದಿದೆ. ರಸ್ತೆಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಪೊಲೀಸ್ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಲ್ಲಿನ ಕಮ್ಮನಹಳ್ಳಿಯಲ್ಲಿ ನಡೆದಿದೆ.
ಬಾಣಸವಾಡಿ ಟ್ರಾಫಿಕ್ ಪೊಲೀಸ್ ಸ್ಟೇಷನ್‌ನ ಕಾನ್ಸ್‌ಟೇಬಲ್ ಉಮೇಶ್ ಹಲ್ಲೆಗೊಳಗಾದ ವ್ಯಕ್ತಿ. ಕಮ್ರಾನ್ ಶಾಹಿದ್ ಎನ್ನುವ ವ್ಯಕ್ತಿ ತಾನು ಸೇರಿದಂತೆ ಇತರ ಕೆಲವರೊಂದಿಗೆ ಸೇರಿಕೊಂಡು ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾನೆ.
ಜುಲೈ 19ರ ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಜುಲೈ 19ರಂದೇ ಎಫ್‌ಐಆರ್ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆಯನ್ನು ಸಹಿಸುವುದಿಲ್ಲ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ತಿಳಿಸಿದೆ.
ಕಮ್ಮನಹಳ್ಳಿಯಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಕಮ್ರಾನ್ ಶಾಹಿದ್ ತಮ್ಮ ಕಾರ್ ನ್ನು ಪಾರ್ಕ್ ಮಾಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಲು ಉಮೇಶ್ ಮುಂದಾಗಿದ್ದಲ್ಲದೆ, ಫೈನ್ ಕಟ್ಟುವಂತೆ ಹೇಳಿದ್ದರು. ಆದರೆ, ಇದರಿಂದ ಸಿಟ್ಟಿಗೆದ್ದ ಕಮ್ರಾನ್ ಶಾಹಿದ್ ನಡು ರಸ್ತೆಯಲ್ಲಿಯೇ ಕರ್ತ್ಯವ್ಯ ನಿರತ ಪೊಲೀಸ್ ಪೇದೆಯ ಮೇಲೆ ತಮ್ಮ ಸಹಚರರ ಜೊತೆಗೂಡಿ ಹಲ್ಲೆ ಮಾಡಿದ್ದಾರೆ ಎಂಬುವುದು ಗೊತ್ತಾಗಿದೆ.
Bengalore university: ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ ಬೆಳ್ತಂಗಡಿ ಮೂಲದ ಶೇಕ್ ಲತೀಫ್ ನೇಮಕ
Railway station: ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೈ ಅಲರ್ಟ್: ಶ್ವಾನದಳದಿಂದ ತಪಾಸಣೆ…!
BRTC Hubli: ಬಿಡದ ಮಳೆಗೆ ಬೆಚ್ಚಿದ ಜನರು; ಬಿ.ಆರ್.ಟಿ.ಎಸ್ ಕಾರಿಡಾರ್ ಜಲಾವೃತ