ಮಂಡ್ಯ: ಜಿಲ್ಲೆಯಲ್ಲಿ ಇಂದಿನಿಂದ ವಿಧ್ಯಾರ್ಥಿ ಪೊಲೀಸ್ ಕೆಡಿಟ್ ಯೋಜನೆಗೆ ಚಾಲನೆ ನೀಡಲಾಗಿದೆ. ಮಂಡ್ಯದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎಸ್ಪಿ ಎನ್. ಸತೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಿಂದ ವಿನೂತನ ಕಾರ್ಯಕ್ರಮ ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು 18 ಶಾಲೆಗಳಲ್ಲಿ ವಿದ್ಯಾರ್ಥಿ ಕೇಡಿಟ್ ಯೋಜನೆಗೆ ಚಾಲನೆ ನೀಡಲಾಯಿತು. ಮಹಿಳೆ ತನ್ನ ರಕ್ಷಣೆ ಮಾಡಿಕೊಳ್ಳುವುದರ ಬಗ್ಗೆ ಕಾರ್ಯಕ್ರಮದಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.
ರೈತರಿಗೆ ಮತ್ತು ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ನಿಗದಿಪಡಿಸಲು ಕೆಎಂಎಫ್ಗೆ ತಿಳಿಸಿದ್ದೇನೆ : ಸಿಎಂ ಬೊಮ್ಮಾಯಿ
ತರಗತಿ ಮೂಲಕ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕ್ರೈಂ ಬಗ್ಗೆ ಮಾಹಿತಿ ನೀಡುವ ಯೋಜನೆ ಇದಾಗಿದ್ದು, ವಾರದಲ್ಲಿ ಒಂದು ದಿನ ಕಾರ್ಯಾಗಾರ ನಡೆಯುತ್ತದೆ. ಸಣ್ಣ ವಯಸ್ಸಿನಿಂದಲೇ ಕಾನೂನು ಬಗ್ಗೆ ಅರಿವು ಇರಬೇಕು, ಪೊಲೀಸ್ ಇಲಾಖೆ ಮೇಲೆ ಒಳ್ಳೆಯ ಭಾವನೆ ಇಟ್ಟುಕೊಳ್ಳಬೇಕು ಮತ್ತು ಹೆಣ್ಣು ಮಕ್ಕಳು ತಾವೇ ಹೇಗೆ ರಕ್ಷಣೆ ಮಾಡಿಕೊಳ್ಳುಬೇಕು ಎನ್ನುವುದರ ಬಗ್ಗೆ ತಿಳಿಸಿಕೊಡಲಾಗುತ್ತದೆ.
ಮದುವೆಗೆ ವಧು ಸಿಗುತ್ತಿಲ್ಲವೆಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡ ಧಾರವಾಡದ ಯುವ ರೈತರು
ಪೊಲೀಸ್ ಇಲಾಖೆ ಬಗ್ಗೆ ತಪ್ಪು ಮಾಹಿತಿ ಕೊಟ್ಟರೆ ಯಾರೂ ಕೂಡ ತಪ್ಪು ತಿಳಿಯಬಾರದು. ಎಲ್ಲ ಮಕ್ಕಳು ಸಹ ಜಾಗೃತವಾಗಿದ್ದುಕೊಂಡು, ಪೊಲೀಸರ ಮೇಲೆ ಭರವಸೆ ಇಟ್ಟು ಗೌರವಿಸಬೇಕು. ಸಮಾಜದಲ್ಲಿ ನಡೆಯುವ ಅಪಾರಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಈ ಕಾರ್ಯಕ್ರಮದ ಮೂಲಕ ಪೊಲೀಸ್ ಇಲಾಖೆ ಬಗ್ಗೆ ಅರಿವು ನೀಡಲಾಯಿತು. ಕಾರ್ಯಕ್ರಮದಲ್ಲಿ ಡಿಡಿಪಿಐ ಜವರೇಗೌಡ,ಡಿಎಸ್ಪಿ ಶಿವಮೂರ್ತಿ,ಎಎಸ್ಪಿ ಸಂತೋಷ, ಪ್ರಾಂಶುಪಾಲ ತಮ್ಮೇಗೌಡ ಸೇರಿ ಹಲವರು ಭಾಗಿಯಾಗಿದ್ದರು.
ನಿಮ್ಮ ಮನೆ ಪ್ರಶಾಂತವಾಗಿರಲು ಭಾವಿಸುತ್ತಿದ್ದೀರಾ..? ಆದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ!
ತುಳಸಿ ಪೂಜೆಗೆ ವಿಶೇಷ ನಿಯಮಗಳು..ಅಪ್ಪಿತಪ್ಪಿಯೂ ಎಲೆ ಕತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..!