Wednesday, January 15, 2025

Latest Posts

ಒಂದೇ ವರ್ಷದಲ್ಲಿ 1500 ಮೊಬೈಲ್ ಮರಳಿಸಿದ ಪೊಲೀಸ್ ಕಮೀಷನರೇಟ್: ರೇಣುಕಾ ಸುಕುಮಾರ್

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಇಂದು 315 ಮೊಬೈಲ್ ಗಳನ್ನು ಪತ್ತೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಹಸ್ತಾಂತರ ಮಾಡಲಾಗಿದೆ. ಈಗಾಗಲೇ ಸುಮಾರು 1500 ಮೊಬೈಲ್ ಗಳನ್ನು ಮಾಲೀಕರಿಗೆ ಹಸ್ತಾಂತರಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ಮಾಡಿದೆ ಎಂದು ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಹೇಳಿದರು.

ಮೊಬೈಲ್ ಹಸ್ತಾಂತರದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 1500 ಮೊಬೈಲ್ ಪತ್ತೆ ಮಾಡಿದ್ದು, ಸಾರ್ವಜನಿಕರಿಗೆ ಹಸ್ತಾಂತರ ಮಾಡಲಾಗಿದೆ ಎಂದರು.

ಒಂದು ವರ್ಷದಲ್ಲಿ ಸಾಕಷ್ಟು ಕಾರ್ಯಾಚರಣೆ ಮಾಡುವ ಮೂಲಕ ಜನಪರ ಕಾಳಜಿ ಹಾಗೂ ಕರ್ತವ್ಯವನ್ನು ಮಾಡಿ 1500ಕ್ಕೂ ಹೆಚ್ಚು ಮೊಬೈಲ್ ಹಸ್ತಾಂತರ ಮಾಡಿದ್ದು, ಇಂದು 315 ಮೊಬೈಲ್ ಹಸ್ತಾಂತರ ಮಾಡಲಾಗಿದೆ ಎಂದು ಅವರು ಹೇಳಿದರು.

- Advertisement -

Latest Posts

Don't Miss