Police-ಡೆಂಗ್ಯೂ ಜ್ವರದಿಂದ ಪೊಲೀಸ್ ಪೇದೆ ನಿಧನ

ಚಿತ್ರದುರ್ಗ: ವಾಣಿಜ್ಯನಗರಿಯಲ್ಲಿ 2018 ರ ಬ್ಯಾಚಿನ ಪೊಲೀಸ್‌ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಸಮಯದಲ್ಲೇ ಅದೇ 2018 ರ ಬ್ಯಾಚಿನ ಪೊಲೀಸ್‌ನೋರ್ವ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ.

ಪೊಲೀಸ್ ಪೇದೆ ಪವನಕುಮಾರ (30) ಮೃತ ದುರ್ದೈವಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾ. ದೊಡ್ಡ ಉಳ್ಳಾರ್ತಿ ನಿವಾಸಿಯಾಗಿದ್ದರು.ಕೆಲವು ದಿನಗಳಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಪೇದೆ ಪವನ್‌ರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆ‌ಗೆ ದಾಖಲು ಮಾಡಲಾಗಿತ್ತು.

ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಅವರು, 2018 ಬ್ಯಾಚ್ ನಲ್ಲಿ ನೇಮಕಗೊಂಡಿದ್ದರು.ಮೃತ ಪೇದೆ ಪವನ್ ಕುಮಾರ್ ಪತ್ನಿ ಕೂಡಾ ಪೊಲೀಸ್ ಪೇದೆ ಆಗಿದ್ದು, ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಪವನ್ ಮೃತ ದೇಹ ಅಂತ್ಯಕ್ರಿಯೆ ನಡೆದಿದೆ.

Anganavadi center-ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಮೊಟ್ಟೆ ವಿತರಣೆ

BBMP- ಒಣ ತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ

ಪ್ಲಾಸ್ಟಿಕ್ ಬಳಕೆಯಿಂದ ಯಾವ ರೀತಿಯ ರೋಗಗಳು ಬರುತ್ತದೆ ಗೊತ್ತಾ..?

About The Author