Dharwad News: ಧಾರವಾಡ: ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಖಡಕ್ ಪೊಲೀಸ್ ಕಾರ್ಯಾಚರಣೆ, 11 ಜನ ಮಾದಕ ವಸ್ತುಗಳ ಮಾರಾಟಗಾರರನ್ನು ಖಾಕಿ ವಶಕ್ಕೆ ಪಡೆದಿದೆ.
ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ಆಯುಕ್ತ ಶಶಿಕುಮಾರ್ ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ.
ಮಾದಕ ವಸ್ತುಗಳ ಮಾರಾಟ ಮತ್ತು ವ್ಯಸನಿಗಳ ಕಾರ್ಯಾಚರಣೆ ನಡೆಸಿ, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಲಾಗಿದೆ.
ಬಂಧಿತರಿಂದ 1 ಕೆ.ಜಿ. 398 ಗ್ರಾಂ ಗಾಂಜಾ, ಜೊತೆಗೆ ಒಂದೂವರೆ ಲಕ್ಷ ಮೌಲ್ಯದ 14 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಧಾರವಾಡ ಮೂಲದ ಒಟ್ಟು 11 ಮಂದಿ ಬಂಧಿತರಾಗಿದ್ದು, ಮಹಮ್ಮದ ಆಲಿ, ದಾದಾಪೀಠ ಹಂಚಿನಮನಿ, ಪರಮೇಶ್ವರ ರೇವಡಿಹಾಳ, ಬಾಬಾಜಾನ ಮೆಹೆಬೂಬಸಾಬ, ಅಬುಜರ ಬಾಗರ, ಜಾಫರ ರಾಜಾಹುಸೇನ ಇರಾನಿ, ಸಾಧಿಕ ಬಾಬಾಹುಸೇನ ರಜಾಹುಸೇನ, ಆಫ್ರಾಬ ಜೀವನಸಾಬ, ಸಲ್ಮಾನ ಕಾಕರ್, ಮಹಮ್ಮದ ಆಸೀಫ್, ಸಚ್ಚಾದ ಸಯ್ಯದ ಬಂಧನವಾಗಿದ್ದಾರೆ. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.