ಕಾಂಗ್ರೆಸ್ ಎಜೇಂಟ್ ಆಗಿ ಪೊಲೀಸರು ವರ್ತನೆ ಮಾಡ್ತಿದ್ದಾರೆ. ಇಡೀ ಸರ್ಕಾರವನ್ನ ಕಂಟ್ರೋಲ್ ಮಾಡ್ತಿದ್ದಾರೆ. ಹಿಂಬಾಗಿಲಿನಿಂದ ಪಾಕಿಸ್ತಾನ ತಾಲಿಬಾನ್ ಸರ್ಕಾರ ಆಡಳಿತ ನಡೆಸುತ್ತಿದೆ ಅಂತ ರಾಜ್ಯ ಸರ್ಕಾರದ ಧರ್ಮ ನೀತಿಯ ವಿರುದ್ಧ ಎಂಪಿ ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದವರು ಶಾಂತಿದೂತರೇ? ಪಾಕಿಸ್ತಾನಕ್ಕೆ ಹೋಗಿ ಭಾರತದ ಪರ ಘೋಷಣೆ ಕೂಗಿದರೆ ಅವರು ಸುಮ್ಮನಿರ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಇಂತಹ ಘಟನೆಗಳು ಸರಳವಾಗಿ ಅಲ್ಲೇ ಮುಚ್ಚಿಹೋಗುತ್ತಿವೆ. ಸರ್ಕಾರದ ಧರ್ಮನಿರಪೇಕ್ಷತೆ ಕೇಳದಂತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ರೇಣುಕಾಚಾರ್ಯ ಟೀಕಿಸಿದ್ರು. ಹಿಂದೂ ಹಬ್ಬಗಳ ಸಂಭ್ರಮಾಚರಣೆಗೆ ಡಿಜೆ ಅನುಮತಿಯನ್ನು ನಿರಾಕರಿಸುತ್ತಿದ್ದಾರೆ. ಆದರೆ ಮಸೀದಿಗಳಲ್ಲಿ ಮೈಸೂರ್ ಆವರಣವನ್ನೂ ಮೀರಿ ಕೇಳಿಸಬಹುದಾದ ಹಜಾನ್‌ಗೆ ಯಾವುದೇ ನಿಯಂತ್ರಣವಿಲ್ಲ. ಇದು ಪಕ್ಷಪಾತದ ಉದಾಹರಣೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ. ಈ ನಾಯಕರಿಂದ ಹುಟ್ಟಿದ ಧರ್ಮಕ್ಕೂ, ದೇಶಕ್ಕೂ ಅವಮಾನ ಆಗುತ್ತಿದೆ. ಇವರ ನಡತೆ ಕಂಡರೆ ಇವರು ಭಾರತಕ್ಕಿಂತ ಪಾಕಿಸ್ತಾನವನ್ನು ಹೆಚ್ಚು ಪ್ರೀತಿಸುತ್ತಿರುವಂತೆ ಕಾಣುತ್ತಿದೆ ಎಂದು ದೂರಿದರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರ ಮುಂದಿನ ಜನ್ಮದಲ್ಲಿ ಮುಸ್ಲಿಂನಾಗಿ ಹುಟ್ಟಬೇಕು ಎಂಬ ಹೇಳಿಕೆಯನ್ನು ಉಲ್ಲೇಖಿಸಿದ ರೇಣುಕಾಚಾರ್ಯ, ಮುಸ್ಲಿಮರಲ್ಲಿ ಪುನರ್ಜನ್ಮದ ನಂಬಿಕೆ ಇಲ್ಲ. ಹಾಗಾದರೆ ಸಂಗಮೇಶ್ ಅವರು ಮುಂದಿನ ಜನ್ಮದ ಬಗ್ಗೆ ಹೇಳುವುದು ಅನರ್ಥಕ. ನೀವು ಬಯಸಿದರೆ ಇದೇ ಜನ್ಮದಲ್ಲಿ ಮುಸ್ಲಿಂ ಆಗಿ ಪರಿವರ್ತಿತರಾಗಿ ಎಂದು ಸವಾಲು ಹಾಕಿದರು.
ವರದಿ : ಲಾವಣ್ಯ ಅನಿಗೋಳ