Sunday, September 8, 2024

Latest Posts

ಬ್ಯಾಹಟ್ಟಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ – 6 ಜನ ಪೊಲೀಸ್ ವಶಕ್ಕೆ

- Advertisement -

Hubli News: ಹುಬ್ಬಳ್ಳಿ: ಬ್ಯಾಹಟ್ಟಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ದಾಳಿಯನ್ನು ಮಾಡಿ 6 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಹಟ್ಟಿ ಗ್ರಾಮದ ಹೊರವಲಯದಲ್ಲಿ ಇಸ್ಪೀಟ್ ಆಟ ಆಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪಿಎಸ್‌ಐ ಸಚಿನ್ ಬೆಳಗಾವಂಕರ ನೇತೃತ್ವದ ತಂಡ ದಾಳಿ ಮಾಡಿ 6 ಜನರನ್ನು ವಶಕ್ಕೆ ಪಡೆದು ಆರೋಪಿಗಳಿಂದ 13,000 ಸಾವಿರ ನಗದು ಹಾಗೂ ಒಂದು ಬೈಕ್ ವಶಕ್ಕೆ ಪಡೆದಿದ್ದಾರೆ.

6 ಜನ ಆರೋಪಿಗಳ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Bengaluru Airport : ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ?: ತಮಿಳುನಾಡು ಮಹತ್ವದ ನಿರ್ಧಾರ

iphone: ಐಫೋನ್ ಫ್ಯಾಕ್ಟರಿಯಿಂದ ಸ್ತ್ರೀ ತಾರತಮ್ಯ!

ಜಂಟಿ ಸದನ ಉದ್ದೇಶಿಸಿದ ರಾಷ್ಟ್ರಪತಿ ಭಾಷಣ

- Advertisement -

Latest Posts

Don't Miss