Banglore News : ರಾಷ್ಟ್ರ ರಕ್ಷಣೆ, ಕಾನೂನು ಮತ್ತು ಸುವ್ಯವಸ್ಥೆ ಇನ್ನಿತರ ಕರ್ತವ್ಯ ಸಮಯದಲ್ಲಿ ಪ್ರಾಣತ್ಯಾಗ ಮಾಡುವ ಹುತಾತ್ಮ ಪೊಲೀಸರ ನೆನಪಿಗಾಗಿ ‘ಸಂಸ್ಮರಣ ದಿನ’ ಆಚರಿಸಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಬಹುದಿನಗಳ ಕೂಗಾದ ಹುತಾತ್ಮರ ನೆನಪಿಗಾಗಿ ‘ಶಾಶ್ವತ ಸ್ಮಾರಕ’ ನಿರ್ಮಾಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.
ಪ್ರತಿಯೊಂದು ಸರ್ಕಾರವೂ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಶಾಶ್ವತ ಸ್ಮಾರಕ ನಿರ್ಮಾಣ ವಿಷಯ ಪ್ರಸ್ತಾಪ ಮಾಡುತ್ತಿದೆ. ದಶಕದ ಹಿಂದೆಯೇ ಕೋರಮಂಗಲ ಕೆಎಸ್ಆರ್ಪಿ ಆವರಣ ದಲ್ಲಿ ಶಾಶ್ವತ ಸ್ಮಾರಕ ನಿರ್ವಣಕ್ಕೆ ಚಾಲನೆ ನೀಡಲಾಗಿತ್ತು. ಇಲ್ಲಿಯವರೆಗೂ ಪೂರ್ಣ ಮಾಡುವಲ್ಲಿ ರಾಜ್ಯ ಸರ್ಕಾರ ಅಥವಾ ಪೊಲೀಸ್ ಇಲಾಖೆ ಗಮನ ಹರಿಸಿಲ್ಲ.
2022 ಸೆ.1ರಿಂದ 2023 ಆ.31ರವರೆಗೆ ದೇಶದಲ್ಲಿ ವಿವಿಧ ದರ್ಜೆಯ 189 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದೇ ಅವಧಿಯಲ್ಲಿ ಕರ್ನಾಟಕದಲ್ಲಿ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲೇ ಪ್ರಾಣತ್ಯಾಗ ಮಾಡಿದ್ದಾರೆ. ಪ್ರತಿವರ್ಷ ಅ.21ರಂದು ಕೆಎಸ್ಆರ್ಪಿ ಅಥವಾ ಸಿಎಆರ್ ಮೈದಾನದಲ್ಲಿ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಿ, ಹುತಾತ್ಮರನ್ನು ಸ್ಮರಿಸುವ ಸಂಪ್ರದಾಯ ನಡೆದು ಬಂದಿದೆ.
ಆದರೆ, ಶಾಶ್ವತ ಸ್ಮಾರಕ ನಿರ್ವಣಕ್ಕೆ ಯಾವುದೇ ಸರ್ಕಾರ ಪಣ ತೊಟ್ಟಿಲ್ಲ. ಆರೋಪಿಗಳ ಬಂಧನ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ, ಸಂಚಾರ ದಟ್ಟಣೆ ತಗ್ಗಿಸಲು, ಉಗ್ರರ ವಿರುದ್ಧ ಕಾರ್ಯಾಚರಣೆ ಸೇರಿದಂತೆ ಪ್ರತಿ ದಿನ ಪ್ರಾಣವನ್ನೇ ಪಣಕ್ಕಿಟ್ಟು ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಹೊರಗಿನ ಶತ್ರುಗಳು ದೇಶದ ಮೇಲೆ ದಾಳಿ ಮಾಡದಂತೆ ಸೈನಿಕರು ಸದಾಕಾಲ ಸೇವೆ ಸಲ್ಲಿಸುತ್ತಿದ್ದರೆ ದೇಶದ ಒಳಗಿನ ಶತ್ರುಗಳನ್ನು ಸದೆಬಡಿಯುವಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಾಣತ್ಯಾಗ ಮಾಡುವವರಿಗೆ ಸ್ಮಾರಕ ನಿರ್ವಣವಾಗಿಲ್ಲ ಎಂದು ಪೊಲೀಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಗಡಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ; ಮಹಾ ಸರ್ಕಾರ ಕುತಂತ್ರ ಆರೋಪ.
ಕಳಪೆ ಆಹಾರ ಪೂರೈಕೆ; ಬಡಮಕ್ಕಳ ಜೀವದೊಂದಿಗೆ ಗುತ್ತಿಗೆದಾರರು, ಅಧಿಕಾರಿಗಳ ಚೆಲ್ಲಾಟ…?