Sunday, September 8, 2024

Latest Posts

ಮತದಾರರಿಗಾಗಿ ತಂದಿದ್ದ ಸೀರೆಗಳನ್ನು ವಶಪಡಿಸಿಕೊಂಡ ಪೊಲೀಸರು

- Advertisement -

political news :

ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಹಲವಾರು ತಂತ್ರಗಳನ್ನು ಹೂಡುತಿದ್ದಾರೆ. ಹಣ ಹೆಂಡ ಸೀರೆ ಬ್ಯಾಗು ಹೀಗೆ ನಾನಾ ರೀತಿಯ ಉಡುಗೊರೆ ನೀಡುವ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನ ಪಡುತಿದ್ದಾರೆ. ಅದೇ ರೀತಿ ಮತದಾರರಿಗೆ ನೀಡಲು ತಂದಿರುವ ಉಡುಗೊರೆಗಳು ಈಗ ಪೊಲೀಸರ ಪಾಲಾಗಿವೆ. ಇಷ್ಟೆ ಅಲ್ಲದೆ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿರುವುದನ್ನು ಕಂಡು ಹಿಡಿದ ಆರಕ್ಷಕ ಸಿಬ್ಬಂದಿಗಳು ಎಲ್ಲವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಪತ್ತೆ ಹಚ್ಚಿದ ವಸ್ತುಗಳು ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನೀಂದ್ರ ಅವರ ಹಿಂಬಾಲಕರಾದ ಮುನಿರಾಜು ಅವರಿಗೆ ಸಂಭಂದ ಪಟ್ಟ ವಸ್ತಗಳೆಂದು ಗುರುತಿಸಲಾಗಿದೆ.  ಬಿಜೆಪಿ ಮುಖಂಡನ ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಏರ್ ಪೋರ್ಟ್ ರಸ್ತೆಯ ಅಗ್ರಹಾರ ಬಡಾವಣೆಯಲ್ಲಿರೋ ಬಿಜೆಪಿ ಮುನಿರಾಜು ಮನೆ ಮೇಲೆ ಈ ದಾಳಿ ನಡೆದಿದೆ. ಮುನಿರಾಜು ಮನೆ ಮೇಲೆ ನಕಲಿ ಮತದಾರರ ಗುರುತಿನ ಚೀಟಿ ಮುದ್ರಣ ಆರೋಪದ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಒಂದು ಪ್ರಿಂಟರ್ ಸೇರಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.  ಸದ್ಯ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರಿಗಳ  ಪ್ರಶ್ನೆಗೆ ಉತ್ತರ ಕೊಡುತ್ತಿರುವ ಮುನಿರಾಜು, ಇವರದ್ದು ಎಸ್ ಎಲ್ ವಿ ಎಂಟರ್ ಪ್ರೈಸಸ್ ಹೆಸರಿನ  ರಿಜಿಸ್ಟರ್ ಜಿಎಸ್ ಟಿ ಇದೆ. ನಾವು ಸೀರೆ ತಂದು ಮಾರಾಟ  ಮಾಡ್ತೀವಿ. ಇದ್ಯಾವುದು ಚುನಾವಣಾ ಸಮಯದಲ್ಲಿ ಮತದಾರರಿಗೆ ನೀಡಲು ತಂದಿರೋದಲ್ಲ. ಸೀರೆ ಖರೀದಿ ಮಾಡಿರೋದಕ್ಕೆ  ನಮ್ಮ ಬಳಿ ಜಿಎಸ್ ಟಿ ಬಿಲ್ ಇದೆ. ಮನೆಯಲ್ಲಿ ಸಿಕ್ಕಿರುವ ಚುನಾವಣಾ ಗುರುತಿನ ಚೀಟಿಗೆ  ಸಂಬಂಧಿಸಿ ಕೆಲವು ಫಾರ್ಮ್ ಪತ್ತೆಗೆ ಸಂಬಂಧಿಸಿ ಉತ್ತರ ನೀಡಿರುವ ಮುನಿರಾಜು ಅವರು ಹೊಸದಾಗಿ ವೋಟರ್ ಐಡಿ ರೆಡಿ ಮಾಡಲು ಫಾರ್ಮ್ ನಂ -6 ಸಿಕ್ಕಿದೆ. ಗುರುತಿನ ಚೀಟಿ ಇಲ್ಲದಿರುವವರಿಗೆ  ಐಡಿ ಮಾಡಲು ಸಹಾಯ ಮಾಡ್ತೀವಿ. ಯಾರು ವೋಟರ್ ಐಡಿ ಬೇಕು ಅಂತಾ ಬರ್ತಾರೆ. ಅವರ ಫಾರ್ಮ್ ಫಿಲ್ ಮಾಡಿ ಪೊಟೋ ಅಂಟಿಸಿ ಕೊಡ್ತಿದ್ವಿ. ಇದು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ ಅಲ್ಲ. ನಾವು ಅಪ್ಲೋಡ್ ಮಾಡಿದ ಫಾರ್ಮ್ ಅನ್ನ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದಿದ್ದಾರೆ. ಇದರಲ್ಲಿ ಯಾವುದೇ ರೀತಿಯ ಅಕ್ರಮ ಸದ್ಯ ಕಂಡು ಬಂದಿಲ್ಲ. ಪೊಲೀಸರ ಭದ್ರತೆಯಲ್ಲಿ  ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಸಾಧಿಸುವುದಿಲ್ಲ-ಕುಮಾರಸ್ವಾಮಿ

2ನೇ ಬಾರಿ ಸತ್ಯಮೇವ ಜಯತೆ ಕಾರ್ಯಕ್ರಮ ಮುಂದೂಡಿಕೆ

ಚುನಾವಣಾ ಪ್ರಚಾರಕ್ಕೆ ಬಂದಿದ್ದ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

- Advertisement -

Latest Posts

Don't Miss