Friday, February 7, 2025

Latest Posts

ಎಂಎಲ್​​ ಸಿ ಸ್ಥಾನಕ್ಕೆ ಪುಟ್ಟಣ್ಣ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ

- Advertisement -

political news

ಬೆಂಗಳೂರು : ಚುನಾವಣೆ ಸಮೀಪಿಸ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿಯೇ ನಡೀತಿದೆ. ಬಿಜೆಪಿ ಎಂಎಲ್​ಸಿ ಪುಟ್ಟಣ್ಣ, ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಪುಟ್ಟಣ್ಣ, ಕಾಂಗ್ರೆಸ್ ಸೇರ್ಪಡೆಯಾದ್ರು.

ಸಾಕಷ್ಟು ದಿನಗಳಿಂದ ಪುಟ್ಟಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ತಾರೆ ಎಂಬ ಚರ್ಚೆ ಇತ್ತು. ಇದೀಗ ಅಧಿಕೃತವಾಗಿ ಬಿಜೆಪಿ ಹಾಗೂ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಪುಟ್ಟಣ್ಣ ರಾಜಾಜಿನಗರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗ ಕಾಂಗ್ರೆಸ್ ಸೇರ್ಪಡೆ ಆಗಿರೋದ್ರಿಂದ ಪುಟ್ಟಣ್ಣಗೆ ಬಹುತೇಕ ರಾಜಾಜಿನಗರ ಟಿಕೆಟ್ ನೀಡಬಹುದು ಎನ್ನಲಾಗಿದೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕೆ ಬಂದಿರೋದ್ರಿಂದ, ಪುಟ್ಟಣ್ಣಗೆ ಕಾಂಗ್ರೆಸ್ ಟಿಕೆಟ್ ಫೈನಲ್ ಆಗಬಹುದ ಎಂಬ ಚರ್ಚೆ ನಡೀತಿದೆ.

ಪುಟ್ಟಣ್ಣ ಸೇರ್ಪಡೆ ಬಳಿಕ ಮಾತ್ನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪುಟ್ಟಣ್ಣ 4 ಬಾರಿ ಪರಿಷತ್ ಸದಸ್ಯರಾಗಿದ್ರು. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಬಿಜೆಪಿ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಏನೂ ಕೊಡುಗೆ ಕೊಡಲು ಆಗಲಿಲ್ಲ. ಹೀಗಾಗಿ, ಕಾಂಗ್ರೆಸ್ ಸೇರಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ರು.

ಸಾಧುಕೋಕಿಲ ಪಕ್ಷ ಸೇರಿದ ಬೆನ್ನಲ್ಲೆ ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾಗಿ ನೇಮಕ

ಬಿಜೆಪಿ ವಿರುದ್ಧ ಕಿಡಿಕಾರಿದ ಎಮ್ ಎಲ್ ಸಿ ಅನಿಲ್ ಕುಮಾರ್..!

ಬೆಂಗಳೂರು ಮಹಿಳಾ ಕ್ರಿಕೇಟ್ ತಂಡಕ್ಕೆ ಎರಡನೆ ಬಾರಿಯೂ ಸೋಲು

- Advertisement -

Latest Posts

Don't Miss