crime
ಶಾಸಕ ಎಂ.ಪಿ.ರೇಣಯಕಾಚಾರ್ಯ ಸಹೋದರನ ಮಗನ ಮೃತ ದೇಹವು ಕಡದಕಟ್ಟೆ ಮಧ್ಯದಲ್ಲಿ ಬರುವ ತುಂಗಾ ಮುಖ್ಯ ಕಾಲುವೆಯಲ್ಲಿ ಬಿದ್ದಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಪುತ್ರ ಚಂದ್ರಶೇಖರ್ ಸಾವಿನ ಹಿಂದೆ ಅನುಮಾನಗಳು ಮೂಡಿದ್ದು ಮಗನನ್ನು ಕಳೆದುಕೊಂಡ ದುಖಃದಲ್ಲಿ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗ ಹಿಂದುತ್ವಕ್ಕಾಗಿ ಹೋರಾಡುತ್ತಿದ್ದ, ವೀರಶೈವ ಪದ್ಧತಿ ಬದಲಾಗಿ ಹಿಂದೂ ಪದ್ದತಿಯಂತೆ ಶವ ಸಂಸ್ಕಾರ ಮಾಡಲಾಗುತ್ತಿದೆ. ನಾನು ಜಾತ್ಯತೀತ ವ್ಯಕ್ತಿ, ಒಂದು ಸಮುದಾಯಕ್ಕೆ ನನ್ನನ್ನು ಸೀಮಿತ ಮಾಡಬೇಡಿ. ಹಿಂದುತ್ವ ನನ್ನ ಉಸಿರು. ಶಿವಮೊಗ್ಗದ ಸಾವರ್ಕರ್ ಫ್ಲೆಕ್ಸ್ ಗಲಾಟೆ ಆದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.
ಚಂದ್ರೆಶೇಖರ್ ಸಾವಿನ ಕುರಿತು ಪ್ರತಿಕ್ರಿಯಿಸಿದ ಅವರು, ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದೆವೆ. ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಇಂಥ ಕೆಲಸ ಮಾಡಿದ್ದಾರೆ, ಅವನ ಬದಲು ನನ್ನನ್ನೇ ಬಲಿ ತೆಗೆದುಕೊಳ್ಳಬೇಕಿತ್ತು ಅದುಬಿಟ್ಟು ಹೀಗೆ ಮಾಡಿರುವುದು ಸರಿಯಲ್ಲ ಎಂದು ಕಣ್ಣೀರು ಹಾಕಿದರು. ಮೃತ ಚಂದ್ರಶೇಖರ್ ತಾಯಿ ಅನಿತಾ ಮಾತನಾಡಿ, ನನ್ನ ಮಗನಿಗೆ ಏನು ಮಾಡಿದ್ದಾರೋ ಗೊತ್ತಿಲ್ಲ. ಆದರೆ ಅವನು ಸಾಯುವ ಮೊದಲು ತುಂಬಾ ಹಿಂಸೆ ಅನಭವಿಸಿದ್ದಾನೆ. ಯಾರ ಮಕ್ಕಳಿಗೂ ಇಂಥ ಪರಿಸ್ಥಿತಿ ಬರಬಾರದು ಎಂದು ಕಣ್ಣೀರು ಹಾಕಿದರು. ಮೃತನ ಅಜ್ಜಿ ಜಯಮ್ಮ ಮತ್ತು ದೊಡ್ಡಮ್ಮ ಸುಜಾತಾ ಸಹ ಮೊಮ್ಮಗನ ಸರಳತೆ ನೆನಪಿಸಿಕೊಂಡು ಕಣ್ಣೀರಿಟ್ಟರು.
ರೇಣುಕಾಚಾರ್ಯರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಎಂ ಅವರು ಭರವಸೆ ನೀಡಿದ್ದಾರೆ, ಪಾರದರ್ಶಕವಾಗಿ ತನಿಖೆ ಮಾಡುತ್ತೆವೆ ಎಂದು ಹೇಳಿದ್ದಾರೆ ಎಂದು ರೇಣುಕಾಚಾರ್ಯರು ತಿಳಿಸಿದರು. ಎಲ್ಲರೂ ಜೋರಾಗಿ ಕೂಗಿ ಕರೆಯುತ್ತಾ ಕಣ್ಣೀರಿಟ್ಟರು. ಹಿರೇಕಲ್ಮಠದ ಅನ್ನದಾನಿ ಶ್ರೀಗಳ ನೇತೃತ್ವದಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಆರಂಭವಾಗಿವೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಏಳು ತಜ್ಞರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲಿಸಿದರು. ಚಂದ್ರಶೇಖರ್ ಸಾವು ಸಹಜವಲ್ಲ ಕೊಲೆಯಾಗಿದೆ. ಮೈಮೇಲೆ ಹಲ್ಲೆಯ ಗುರುತುಗಳಿವೆ ಎಂದು ಕಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿದ ಯುವತಿಯಿಂದ ತಪ್ಪೊಪ್ಪಿಗೆ