ಚಿಕ್ಕೋಡಿ: ರಾಜ್ಯದಲ್ಲಿ ಸಕಾಲಕ್ಕೆ ಮಳೆ ಬಾರದೆ ರೈತರು ಬೆಳೆದ ಬೆಳೆಗಳು ನಾಶವಾಗಿ ಹೋಗಿ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ ಇದರಿಂದ ರೈತರು ತತ್ತರಿಸಿ ಹೋಗಿದ್ದಾರೆ ಇಷ್ಟಿದ್ದರೂ ಚುನಾವಣಾ ಸಮಯದಲ್ಲಿ ಮನೆ ಬಾಗಿಲಿಗೆ ಬಂದು ಮತ ಕೇಳುವ ಜನ ಪ್ರತಿನಿಧಿಗಳು ಜನರು ಕಷ್ಟದಲ್ಲಿ ಇರುವಾಗ ಯಾರು ಸಹ ಬಂದು ಕೇಳುವುದಿಲ್ಲವೆಂದುಜನಪ್ರತಿನಿಧಿಗಳು ಕಾಣೆಯಾಗಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿ ಪ್ರತಿಭಟನೆಯ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬರಗಾಲ ಆವರಿಸಿ ರೈತರು ಸಂಕಷ್ಟ ಎದುರಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು ಎನಿಸಿಕೊಂಡಿರುವ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಬ್ ಜೊಲ್ಲೆ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಹಲವು ವರ್ಷಗಳಿಂದ ನಮಗೆ ಕಾಣಿಸುತ್ತಿಲ್ಲ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ ಹಾಗಾಗಿ ನಮ್ಮ ಜಿಲ್ಲೆಯ ಸಂಸದರು ಬಹುಶಃ ಕಳೆದು ಹೋಗಿರಬಹುದು ದಯವಿಟ್ಟು ಹುಡುಕಿಕೊಡುವಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರುನ್ನೂ ದಾಖಲಿಸಿದ್ದಾರೆ.
ಜನರಿಂದ ಆಯ್ಕೆಯಾದ ಜನಪ್ರತಿನಿದಿಗಳು ಹಲವು ವರ್ಷಗಳಿಂದ ಕಾಣೆಯಾಗಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರು ಬರಗಾಲದಿಂದ ತತ್ತರಿಸಿದ್ದಾರೆ ಅವರುನ್ನು ಬೇಗ ಹುಡುಕಿಸಿಕೊಡಿ ನಮ್ಮ ಕಷ್ಟಕ್ಕೆ ಅವರ ಅಗತ್ಯವಿದೆ ಎಂದು ಠಾಣೆಯಲ್ಲಿ ದೂರನ್ನು ದಾಖಲಿಸಿ ಶಾಸಕರು ಮತ್ತು ಸಂಸದರ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.
Special Pooja: ಲೋಕ ಕಲ್ಯಾಣಕ್ಕಾಗಿ ಗಣೇಶನ ಮುಂದೆ ಹೋಮ: ವಿಶೇಷ ಪೂಜೆ ಸಲ್ಲಿಕೆ..!
Halashree : ಖಾವಿ ಕಳಚಿ ಟಿ ಶರ್ಟ್ ಚಡ್ಡಿ ಹಾಕಿ ರೈಲಿನಲ್ಲಿ ಹಾಲಾಶ್ರೀ ಪ್ರಯಾಣ: ಪೊಲೀಸರಿಂದ ಬಂಧನ..!
Gangarathi: ಕಾಶಿ ವಿಶ್ವನಾಥ ಮಾದರಿಯಲ್ಲಿ ಹುಬ್ಬಳ್ಳಿ ಗಣಪನಿಗೆ ಗಂಗಾರತಿ..!