Monday, April 14, 2025

Latest Posts

Political News: ತಮಿಳುನಾಡಿನಲ್ಲಿ ‘ಅಮ್ಮ’ ರೀ ಎಂಟ್ರಿ!

- Advertisement -

Political News: ಅಮ್ಮ ಎಂದೇ ಖ್ಯಾತಿ ಗಳಿಸಿದ ಮಾಜಿ ಸಿ.ಎಂ ದಿವಂಗತ ಜಯಲಲಿತಾ ಅವರ ಹೆಸರು ತಮಿಳುನಾಡು ರಾಜಕೀಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿನಲ್ಲಿ ಮತ್ತೊಮ್ಮೆ ಅಮ್ಮನ ಆಡಳಿತ ಪುನರ್ ಸ್ಥಾಪಿಸಲಾಗುವುದು ಎಂದು ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ಅವರು ಘೋಷಿಸಿದ್ದಾರೆ.
ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿರುವ ಶಶಿಕಲಾ, ಎಐಎಡಿಎಂಕೆ ಕಥೆ ಇನ್ನೂ ಮುಗಿದಿಲ್ಲ. 2026ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಭರ್ಜರಿ ಬಹುಮತದೊಂದಿಗೆ ಗೆಲ್ಲಿಸುವ ಮೂಲಕ ಅಮ್ಮನ ಆಡಳಿತವನ್ನು ಮರುಸ್ಥಾಪಿಸುವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವು ಹೀನಾಯ ಸೋಲು ಅನುಭವಿಸಿದೆ. ಪಕ್ಷವನ್ನು ಪುನರುತ್ಥಾನ ಮಾಡುವ ಮೂಲಕ 2026ರಲ್ಲಿ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಕಳೆದ 2ವರ್ಷಗಳಿಂದ ಎಐಎಡಿಎಂಕೆ ಇಬ್ಬರು ಮಾಜಿ ಸಿ.ಎಂ ಗಳ ಕಲಹದಿಂದ ಸೊರಗಿದೆ. ಪಳನಿ ಸ್ವಾಮಿ ಹಾಗೂ ಪನ್ನೀರ್ ಸೆಲ್ವಂ ಒಳಜಗಳದಿಂದ ಪಕ್ಷಕ್ಕೆ ಹಾನಿಯಾಗಿದೆ. ನಾಯಕತ್ವ ಸಂಘರ್ಷದಲ್ಲಿರುವ ಪಕ್ಷಕ್ಕೆ ಸೂಕ್ತ ನಾಯಕತ್ವ ಬೇಕಿದೆ, ಇದೇ ನನ್ನ ರಾಜಕೀಯ ಪ್ರವೇಶಕ್ಕೆ ಸರಿಯಾದ ಸಮಯ. ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಲಾಗುವುದು, ಒಡೆದ ಮನೆಯಾಗಿರುವ ಪಕ್ಷವನ್ನು ಒಗ್ಗೂಡಿಸಲಾಗುವುದು ಎಂದು ಶಶಿಕಲಾ ಹೇಳಿದ್ದಾರೆ.

ಈ ಮೂಲಕ ಪಕ್ಷದಲ್ಲಿನ ಆಂತರಿಕ ಕಲಹದ ನಡುವೆಯೇ ಮತ್ತೊಮ್ಮೆ ಭರ್ಜರಿಯಾಗಿ ರಾಜಕೀಯ ಪ್ರವೇಶ ಮಾಡಿ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಮತ್ತೊಮ್ಮೆ ಜಯಲಲಿತಾ ಅವರ ಆಡಳಿತದ ದಿನಗಳನ್ನು ಪುನರ್ ಸ್ಥಾಪಿಸುವ ಇಂಗಿತವನ್ನು ಶಶಿಕಲಾ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss