Saturday, July 27, 2024

Latest Posts

Political News: ಕಾಂಗ್ರೆಸ್​ನ 99 ಸಂಸದರು ಅನರ್ಹ?

- Advertisement -

Political News: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಬ್ಯಾಂಕ್ ಖಾತೆಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಹಣ ಜಮೆ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಇದೀಗ ಈ ವಿಚಾರ ಕಾಂಗ್ರೆಸ್​ಗೆ ದೊಡ್ಡ ತಲೆನೋವು ತಂದೊಡ್ಡಿದೆ. ಅಲ್ಲದೇ, ಕಾಂಗ್ರೆಸ್​ನ 99 ಸಂಸದರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.

ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ 123 (1)ರ ಅನ್ವಯ ಮತದಾರರಿಗೆ ಆಮಿಷ ಒಡ್ಡುವುದು ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಆಯ್ಕೆಯಾಗಿರುವ 99 ಕಾಂಗ್ರೆಸ್ ಸಂಸದರನ್ನು ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ದೆಹಲಿ ಮೂಲದ ವಕೀಲ ವಿಬೋರ್ ಆನಂದ್ ಎಂಬುವವರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 146 ರ ಅನ್ವಯ ಕೇಂದ್ರ ಚುನಾವಣಾ ಆಯೋಗ, ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಎಲ್ಲರ ವಿರುದ್ಧವೂ ತನಿಖೆ ನಡೆಸಲು ಸೂಚಿಸುವಂತೆ ಕೋರಿದ್ದಾರೆ.

ಕಾಂಗ್ರೆಸ್ ನಾಯಕರು ಸಹಿ ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ವಿತರಿಸಲಾಗಿತ್ತು. ಅಲ್ಲದೆ ಜೂನ್ 4ರ ಚುನಾವಣಾ ಫಲಿತಾಂಶದ ಮರುದಿನವೇ ಪ್ರತಿಯೊಬ್ಬರ ಖಾತೆಗೆ 8,500 ರೂಪಾಯಿಗಳನ್ನು ಪಾವತಿಸಲಾಗುತ್ತದೆ ಎಂದು ಸುಳ್ಳು ಭರವಸೆಯನ್ನು ನೀಡಲಾಗಿತ್ತು ಎಂದು ಆರೋಪಿಸಿರುವ ವಕೀಲರು, ಈಗ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಎಲ್ಲ ಸಂಸದರನ್ನು ಅನರ್ಹಗೊಳಿಸಲು ಕೋರಿ ಮನವಿ ಮಾಡಿದ್ದಾರೆ.

ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!

ಉಪಚುನಾವಣೆ ದಿನಾಂಕ ಘೋಷಣೆ

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Latest Posts

Don't Miss