Dharwad News: ಧಾರವಾಡ: ಧಾರವಾಡದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಕಾರ್ಮಿಕ ಸಚಿನ ಸಂತೋಷ್ ಲಾಡ್ ಭಾಷಣ ಮಾಡಿದರು. ಈ ವೇಳೆ, ಕಾರ್ಯಕ್ರಮಕ್ಕೆ ಸಿಎಂ, ಕೃಷಿ ಸಚಿವ ಗೈರು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ನಾನು ಯಾವುದನ್ನು ಮಾತನಾಡಲ್ಲ. ವಿಸಿ ಅವರು ಸಿಎಂ ಅವರಿಗೆ ಬೇಟಿ ಆಗಿದ್ದಾರೋ ಗೊತ್ತಿಲ್ಲ. ಕೃಷಿ ಸಚಿವ ವಾರಣಾಸಿಗೆ ಹೋಗಿದ್ದಾರೆ. ಇವಾಗ ನಾವು ಕೃಷಿ ಮೇಳವನ್ನ ಉದ್ಘಾಟನೆ ಮಾಡಿದ್ದೇವೆ. ವಿ ಸಿ ಅವರು ಇದರಲ್ಲಿ ರಿಸರ್ಚ ಮಾಡಿದ್ದಾರೆ. ಅವರು ಇಗ್ನೋರೆಂಟ್ ಇದಾರೆ ಎಲ್ಲ ಇಲಾಖೆಗಳ ಸಂಕಿ ಸಂಖ್ಯೆ ಗಳ ಬಗ್ಗೆ ವಿಸಿ ಅವರ ಹತ್ರ ಇರಬೇಕು. ಕೃಷಿ ವಿವಿ ಎಷ್ಟು ಮೇಳೆಯಾಗಿದೆ ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಇರಬೇಕು. ನಾವು ವಿ ಸಿ ಅವರಿಗೆ ಬುದ್ದಿ ಹೇಳುವಷ್ಟು ದೊಡ್ಡವರಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲ ಹೆಣ್ಣು ಮುಟ್ಟಾದಾಗ 6 ದಿನ ರಜೆ ಕೊಡಬೇಕು ಎಂದು ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿದ ಸಚಿವ ಸಂತೋಷ್ ಲಾಡ್, ರಜೆ ಕೊಡಬೇಕು ಎಂದು ಪ್ರಸ್ತಾವನೆ ಬಂದಿದೆ. ಹೆಣ್ಣು ಮಕ್ಕಳಿಗೆ ವರ್ಷದಲ್ಲಿ 6 ದಿನ ರಜೆ ಕೊಡಬೇಕು ಎಂದು ಪ್ರಸ್ತಾವಣೆ ಬಂದಿದೆ. ಎಲ್ಲ ಇಲಾಖೆಗಳ ಅಭಿಪ್ರಾಯ ಬೇಕು. ಎಲ್ಲ ಇಂಡಸ್ಟ್ರಿಜ್ ಗಳ ನ್ನ ಕರೆಸಿ ಸಭೆ ಮಾಡಿ ಅಭಿಪ್ರಾಯ ತೆಗೆದುಕ್ಕೊಳ್ಳಬೇಕು. ಒಪ್ಪಿಗೆ ಪಡೆದುಕ್ಕೊಂಡು ಸರಕಾರದ ಹತ್ರ ಹೋಗುತ್ತೆವೆ, ಸರಕಾರ ಎನ್ ತಿರ್ಮಾನ ತಗೊತ್ತದೆ ನೋಡಬೇಕು ತಿರುಪತಿ ಲಡ್ಡು ವಿಚಾರ, ನಾನು ಇವತ್ತು ನೋಡಿದ್ದೆನೆ ಸತ್ಯಾಸತ್ತತೆ ಹೊರಗೆ ಬರಲಿ ನೋಡೋಣ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.