Vijayapura News: ವಿಜಯಪುರ: ವಿಜಯಪುರದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಕಿಡಿಕಾರಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೀಯಾ ಅಂತಾ ಒಪ್ಪತ್ತೀರಾ..?ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣದಲ್ಲಿ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಆಗಿದೆ. ಹಿಂದುಳಿದ ಹಾಗೂ ದಲಿತರಿಗೆ ಕಾಂಗ್ರೆಸ್ ಮೋಸ ಮಾಡಿ ಮಾಡಿ ಕೇಂದ್ರ, ರಾಜ್ಯದಲ್ಲಿ ಆಡಳಿತ ಮಾಡಿದ್ದಾರೆ. ನೇರವಾಗಿ ಕಾಂಗ್ರೆಸ್ ಬೆತ್ತಲೆ ಆಗಿ ಹೋಗಿದೆ. ಇದೇ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಆರ್ಥಿಕ ಇಲಾಖೆ ಸಿದ್ದರಾಮಯ್ಯ ಕೈಯಲ್ಲಿ ಇದೆ. ಆದ್ರೆ, ಕಾಂಗ್ರೆಸ್ ಬಗ್ಗೆ ಯಾವ ಪದ ಬಳಸಬೇಕು ತಿಳಿತ್ತಾ ಇಲ್ಲ. ಇದು ಅಸಹ್ಯ ರಾಜಕಾರಣ . 187 ಕೋಟಿ ಹಣ ತಿಂದು, ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಮನೆಗೆ 25 ಲಕ್ಷ ಕೊಡಲು ಹಿಂದೆ ಮುಂದೆ ನೋಡ್ತಾ ಇದ್ದಾರೆ. ಒಂದಲ್ಲ, ಎರಡಲ್ಲ, ಹತ್ತಾರೂ ಹಗರಣಗಳು. ಸಾಕ್ಷಿಗಳು ಬೇಗ ಸಿಗುತ್ತೇವೆಂದು ಕಾಂಗ್ರೆಸ್ ಸರ್ಕಾರ ಸಿಬಿಐಗೆ ಕೊಡುತ್ತಿಲ್ಲ. ಬೆಲೆಬಾಳುವ 14 ಸೈಟ್ ಗಳನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಎಂಟುವರೆ ಕೋಟಿ ಘೋಷಣೆ ಮಾಡಿದ್ದಾರೆ. ಆದ್ರೇ, ಮುಡಾ ಹಗರಣ ಬಂದ್ಮೇಲೆ 60 ಕೋಟಿ ಕೊಟ್ಟು ಬಿಡಿ ನಾನು ಸುಮ್ಮನೆ ಆಗ್ತೇನಿ ಎಂದಿದ್ದಾರೆ. ಬಿಜೆಪಿಯ 22 ಹಗರಣದ ಬಗ್ಗೆ ಕಾಂಗ್ರೆಸ್ನವರು ಹೇಳಿದ್ದಾರೆ. ಅದರ ಬಗ್ಗೆ ಪಟ್ಟಿ ಬಿಡುಗಡೆ ಮಾಡಿ ಎಂದು ಈಶ್ವರಪ್ಪ ಸವಾಲ್ ಹಾಕಿದ್ದಾರೆ.