ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗೆ ಒಳ ಗುದ್ದಾಟ ಶುರುವಾಗಿದೆ.
ಚುನಾವಣಾ ದಿನಾಂಕ ಘೋಷಣೆ ಆಗುತಿದ್ದಂತೆ ಅಭ್ಯರ್ಥಿಗಳು ಮತ್ತು ಆಕಾಂಕ್ಷಿಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ.ಆದರೆ ಕಾಂಗ್ರೆಸ್ ನಲ್ಲಿ ಮಾತ್ರ ಸಿಎಂ ಆಗಬೇಕು ಎನ್ನುವ ಹಂಬಲದಿಂದ ಗದ್ದುಗೆಗಾಗಿ ಗುದ್ದಾಟ ಶುರುವಾಗಿದೆ.
ಕಾಂಗ್ರೆಸ್ನಲ್ಲಿ ಈ ಮೊದಲು ಸಿಎಂ ಸ್ಥಾನಕ್ಕೆ ಒಳ ಮಾತುಗಳು ನಡೆದಿದ್ದವು ಆದರೆ ಆಗಿನ್ನು ಚುನಾವಣೆ ಇರಲಿಲ್ಲ ಹಾಗಾಗಿ ಕೆಲವು ದಿನಗಳ ಕಾಲ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಢ ಡಿಕೆ ಶಿವಕುಮಾರ ವೈಮನಸ್ಸು ಉಂಟಾಗಿ ಇಬ್ಬರು ಮೌನವಹಿಸಿದ್ದರು. ಆದರೆ ಚುನಾವಣೆ ಹತ್ತಿರ ಬರುತಿದ್ದಂತೆ ಭಾರತ ಐಕ್ಯತಾ ಯಾತ್ರೆಯಲ್ಲಿ ವೈಮನಸ್ಸು ಮರೆತು ರಾಹುಲ್ ಗಾಂಧಿ ಜೊತೆ ನಗುಮೊಗದಿಂದ ಹೆಜ್ಜೆ ಹಾಕಿದ್ದರು. ಇಷ್ಟುದಿನಗಳ ಕಾಲ ಎಲ್ಲವೂ ಸರಿಯಾಗಿತ್ತು ಇನ್ನು ಮುಂದೆ ಯಾವುದೆ ಒಳ ಜಗಳಗಳು ಆಗುವುದಿಲ್ಲ ಅನ್ನುವುದರೊಳಗೆ ಮತ್ತೆ ಸಿಎಂ ಕುರ್ಚಿಗಾಗಿ ನಾ ಮುಂದು ತಾ ಮುಂದು ಎಂದು ಟಾವೆಲ್ ಹಾಕುತಿದ್ದಾರೆ.
ಇನ್ನು ಚುನಾವಣೆ ದಿನಾಂಕ ಘೋಷಣೆಯಾದಿದೆ ಅಷ್ಟೆ ಇನ್ನು ಚುನಾವಣೆನೂ ನಡೆದಿಲ್ಲ ಫಲಿತಾಂಶವೂ ಬಂದಿಲ್ಲ ಆದರೆ ನಾವು ಬಹುಮತ ಸಾಧಿಸಿಬಿಟ್ಟಿದ್ದೇವೆ ಅನ್ನೋ ಆಲೋಚನೆಯಲ್ಲಿ ಸಿಎಂ ಸ್ಥಾನಕ್ಕೆ ಸೆಣಸಾಡುತಿದ್ದಾರಲ್ಲ ಏನಿದು . ಹಾಗಂತ ನಾವೇನು ಚುನಾವಣೆಯಲ್ಲಿ ಇವರು ಗೆಲ್ಲವುದಿಲ್ಲ ಅಂತಲ್ಲ ಮತದಾರರು ಮನಸ್ಸನ್ನುಯಾರು ಗೆಲ್ಲುವಲ್ಲಿ ಸಫಲರಾಗುತ್ತಾರೋ ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆ.
ಅದೇನೆ ಇರಲಿ ಯಾವ ಪಕ್ಷವಾದರೂ ಗೆಲ್ಲಲಿ ಗೆದ್ದವರು ಮತಹಾಕಿದವರಿಗೆ ನೆರವಾಗಿ ಅಂತ ಹೇಳುತ್ತೇವೆ
#rahulgandhi
ಇಬ್ಬರು ಯುವತಿಯರೊಂದಿಗೆ ಬೈಕ್ ಸ್ಟಂಟ್, ಯುವಕ ಅರೆಸ್ಟ್, ವೀಡಿಯೋ ವೈರಲ್