Political News: ಬೆಂಗಳೂರಿನ ಎಲ್ಲ ಕ್ಷೇತ್ರಗಳಿಗೂ ಅನುದಾನ ರಿಲೀಸ್ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಜಯನಗರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡಿರಲಿಲ್ಲ.
ಕಾರಣವೇನೆಂದರೆ, ಜಯನಗರ ಕ್ಷೇತ್ರ ಬಿಜೆಪಿ ಶಾಸಕ ಸಿ.ಕೆ.ಮೂರ್ತಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಸಿಟ್ಟಿಗೆದಿದ್ದ ಡಿಕೆಶಿ, ಜಯನಗರ ಬಿಟ್ಟು ಬೆಂಗಳೂರಿನ ಎಲ್ಲ ನಗರಗಳ ಅಭಿವೃದ್ಧಿಗೆ 10 ಕೋಟಿ ರೂಪಾಯಿ ಅನುದಾನ ನೀಡಿದ್ದರು.
ಈ ಕಾರಣಕ್ಕೆ ಮೂರ್ತಿ ರೊಚ್ಚಿಗೆದ್ದು, ಕಾಂಗ್ರೆಸ್ ಸರ್ಕಾರ ಪಾರ್ಷಿಯಾಲಿಟಿ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಬಳಿಕ ಮೆಟ್ರೋ ಹೊಸ ಮಾರ್ಗ ಉದ್ಘಾಟನೆ ವೇಳೆ ಸಂಸದ ತೇಜಸ್ವಿ ಸೂರ್ಯ, ಡಿಕೆಶಿ ಅವರು ಯಾಕೆ ಜಯನಗರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲವೆಂದು ಕಾರಣ ಕೇಳಿದಾಗ, ಎಲ್ಲರೊಂದಿಗೆ ಇದ್ದ ಹಾಗೆ ನನ್ನ ಬಳಿ ಇರಬಾರದು. ತಗ್ಗಿ ಬಗ್ಗಿ ಇದ್ದರೆ, ನಾವು ಸರಿಯಾಗಿಯೇ ಇರುತ್ತೇವೆ ಅನ್ನೋ ರೀತಿ ಹೇಳಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು, ಜಯನಗರ ಸೆಲೆಬ್ರಿಟಿಗಳು ಸೇರಿ ಹಲವರು ಅನುದಾನಕ್ಕಾಗಿ ಆಗ್ರಹಿಸಿ, ಪತ್ರ ಬರೆದಿದ್ದರು. ಹೋರಾಟ ನಡೆಸಿದ್ದರು. ಇದೀಗ ಕೊನೆಗೂ ಡಿಸಿಎಂ ಡಿಕೆಶಿ ಜಯನಗರ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ.