Political News: ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನರಾಗಿದ್ದು, ಹಲವು ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ. ತಮ್ಮ ಕಾಲದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಮತ್ತು ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಮಾದರಿ ರಾಜಕಾರಣಿಯಾಗಿ ಬದುಕ್ಕಿದ್ದವರು. ಅವರು ರಾಜಕಾರಣದಿಂದ ರಿಟೈರ್‌ಮೆಂಟ್ ತೆಗೆದುಕೊಂಡಿದ್ದರ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ್ದರು. ಅವರೇನು ಹೇಳಿದ್ದರು ಎಂಬ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ.
ಮಾಧ್ಯಮ ಪ್ರತಿನಿಧಿಯೊಬ್ಬರು ಇಂದಿನ ಕಲುಶಿತ ರಾಜಾರಣಕ್ಕೆ ಬರುವ ಯುವ ಪೀಳಿಗೆಯವರಿಗೆ ನೀವು ಏನು ಸಂದೇಶ ಕೊಡಲು ಬಯಸುತ್ತೀರಿ ಎಂದು ಕೇಳಿದಾಗ, ಕಲುಷಿತ ಎಂದು ರಾಜಕಾರಣಕ್ಕೆ ಬರುವುದನ್ನು ಬಿಟ್ಟರೆ, ರಾಜಕಾರಣ ಇನ್ನೂ ಕಲುಶಿತವಾಗುತ್ತದೆ. ಯುವಕರು ರಾಜಕೀಯಕ್ಕೆ ಬರಬೇಕು. ಯುವಕರು, ಯುವತಿಯರು ರಾಜಕೀಯಕ್ಕೆ ಬರದೇ ಇದ್ದರೆ, ಅದು ಒಂದು ರೀತಿಯ ನಿಂತ ನೀರಾಗುತ್ತದೆ. ಅಲ್ಲದೇ ರಾಜಕಾರಣದಲ್ಲಿ ನಾವು ಮುಂದುವರಿಯಬೇಕಾದರೆ, ಹೊಸ ರಕ್ತ ಬರಬೇಕು. ಹಾಗಾಗಿ ಯುವಕ, ಯುವತಿಯರು ರಾಾಜಕಾರಣಕ್ಕೆ ಬರಬೇಕು ಎಂದು ಎಸ್.ಎಂ.ಕೃಷ್ಣ ಸಲಹೆ ನೀಡಿದ್ದರು.
ಇನ್ನು ತಾವು ರಿಟೈರ್‌ಮೆಂಟ್ ತೆಗೆದುಕೊಂಡ ಬಗ್ಗೆ ಮಾತನಾಡಿದ್ದ ಎಸ್.ಎಂ.ಕೃಷ್ಣ, ಬೇಕಾದಾಗ ಜನ ಇದ್ದಾರೆ ಬಿಜೆಪಿಯಲ್ಲಿ, ನಾನೊಂದು ತೃಣ ಮಾತ್ರ. ನನ್ನ ರಿಟೈರ್‌ಮೆಂಟ್‌ನಿಂದ ಬಿಜೆಪಿಗೆ ಏನೂ ನಷ್ಟವಾಗುವುದಿಲ್ಲ. ನಾನು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ, ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲ. ಐ ಆ್ಯಮ್ ವೆರಿ ಕ್ಲಿಯರ್ ಅಬೌಟ್ ಇಟ್, ಸಾಕು ರಾಜಕಾರಣ ಎಂದು ಎಸ್.ಎಂ.ಕೃಷ್ಣ ಹೇಳಿದ್ದರು.
ಇನ್ನು ರಾಜಕಾರಣ ಬಿಟ್ಟ ಬಳಿಕ ನಿಮ್ಮ ದಿನಚರಿ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಎಸ್.ಎಂ.ಕೃಷ್ಣ, ಬೆಳಿಗ್ಗೆ 11 ಗಂಟೆಯ ಮೇಲೆ ನನ್ನನ್ನು ಭೇಟಿಯಾಗಲು ಜನ ಬರುತ್ತಾರೆ. ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ. ಬಳಿಕ ಊಟ ಮಾಡುತ್ತೇನೆ. ವಿಶ್ರಾಂತಿ ಪಡೆಯುತ್ತೇನೆ. ಹೀಗೆ ದಿನಗಳೆಯುತ್ತದೆ.

