Saturday, April 19, 2025

Latest Posts

ದೊಡ್ಡಬಳ್ಳಾಪುರದಲ್ಲಿ ಬಿಜೆಪಿ- ಕಾಂಗ್ರೆಸ್ ಮುಖಂಡರ ಮದ್ಯೆ ವಾಕ್ ಸಮರ : ಶಾಸಕರಿಗೆ ಪಂಥಾಹ್ವಾನ ಕೊಟ್ಟ ಧೀರಜ್  ಮುನಿರಾಜು

- Advertisement -

Political News:

ದೊಡ್ಡಬಳ್ಳಾಪುರ : ರಾಜ್ಯದಲ್ಲಿ ರಾಜಕೀಯ ರಣರಂಗ ದಿನೇ ದಿನೇ ಕಾವೇರುತ್ತಿದೆ. ಟಿಕೇಟ್ ಆಕಾಂಕ್ಷಿಗಳ ವಾಕ್ ಸಮರ ಜೋರಾಗಿದೆ. ಕಾಂಗ್ರೆಸ್  ಪ್ರಜಾಧ್ವನಿಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ  ಧೀರಜ್ ಮುನಿರಾಜುಗೆ ಬಹಿರಂಗ  ಚರ್ಚೆಗೆ ಶಾಸಕ ವೆಂಕಟರಮಣಯ್ಯ ಆಹ್ವಾನ ನೀಡಿದ್ದರು. ಅಭಿವೃದ್ಧಿ ವಿಚಾರದ ಹೇಳಿಕೆಗೆ ಸಂಬಂಧಿಸಿ  ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದ ಶಾಸಕ ವೆಂಕಟರಮಣಯ್ಯಗೆ ಇದೀಗ  ಬಿಜೆಪಿ ಟಿಕೆಟ್ ಆಕಾಂಕ್ಷಿ ಧೀರಜ್   ಮುನಿರಾಜು ಪ್ರಮುಖ ಹೇಳಿಕೆ  ನೀಡುವ ಮೂಲಕ  ಮಾತಿನ  ಪ್ರಹಾರವನ್ನೇ ಮಾಡಿದ್ದಾರೆ. ದೊಡ್ಡಬಳ್ಳಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ  ಧೀರಜ್ ಮುನಿರಾಜು  ಹಾಗು ಶಾಸಕ ವೆಂಕಟರಮಣಯ್ಯ ಮಧ್ಯೆ ಇದೀಗ ವಾಕ್  ಸಮರ ನಡೆದಿದೆ.

ಶಾಸಕರಾದವರು ಯಾವುದೇ ಪಕ್ಷ  ಅಧಿಕಾರದಲ್ಲಿದ್ದರೂ ಅಭಿವೃದ್ಧಿಯ ಕಡೆಗೆ  ಛಾತಿ ಇರಬೇಕು . ಶಾಸಕರು   ಕೇವಲ 13ರಿಂದ  18 ರ ವರೆಗೆ ಮಾತ್ರ ಶಾಸಕರಾದವರಲ್ಲ 23 ರ ವರೆಗೂ ಶಾಸಕ. ನಿಮ್ಮ ಅವಧಿಯ  ಕ್ಯಾಲೆಂಡರ್  ನೋಡಿದ್ದೇವೆ ಯಾವುದೇ ಅಭಿವೃದ್ಧಿ ಕಾಮಗಾರಿ  ವಿಚಾರವಾಗಿರಲಿ ಪ್ರತಿ ಕಾಮಗಾರಿ ವಿಚಾರವಾಗಿಯೂ  ಮಾಧ್ಯಮ ಇಲ್ಲವೇ ಬಹಿರಂಗ ಚರ್ಚೆಗೆ  ಬನ್ನಿ ನಾನು ಸಿದ್ದನಿದ್ದೇನೆ ಎಂದು ಧೀರಜ್  ಮುನಿರಾಜು, ಶಾಸಕರಿಗೆ ಬಹಿರಂಗ ಸವಾಲೆಸೆದರು.

ಶೈಕ್ಷಣಿಕ ವಿಚಾರವಾಗಿ ಮಾತನಾಡಿ ಡಿಪ್ಲೋಮೋ  ಕೋರ್ಸ್ ವಿಚಾರವಾಗಿ ವಾಗ್ದಾಳಿ  ನಡೆಸಿದ ಧೀರಜ್, ಎಂದಾದರೂ ನೀವು ಸರ್ಕಾರಿ ಡಿಪ್ಲೊಮೋ ಕಾಲೇಜು ಬೇಕೆಂದು ಪತ್ರ ಬರೆದಿದ್ದೀರಾ  ಎಂಬುದಾಗಿ ಶಾಸಕರನ್ನು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್​ನಲ್ಲಿ ತೊಡಗಿದೆ: ಡಿಕೆಶಿ ಕಿಡಿ

ಬಿಜೆಪಿಗೆ ಭರ್ಜರಿ ಗೆಲುವು ಪಕ್ಕಾ; ಅಮಿತ್ ಶಾ ಹೀಗೆ ಹೇಳಿದ್ಯಾಕೆ…?

ರೋಣ ವಿಧಾನಸಭಾ ಎಲೆಕ್ಷನ್; ದೊಡ್ಡಯ್ಯ ಭರ್ಜರಿ ಪ್ರಚಾರ!

 

 

 

- Advertisement -

Latest Posts

Don't Miss