political news:
ಕರ್ನಾಟಕದ ರಾಜಕೀಯ ನಾಯಕರು ಪಕ್ಷಗಳ ನಡುವೆ ಒಳಜಗಳಗಳಿಂದಾಗಿ ದಿನವೂ ಕಾಂಗ್ರೆಸ್ ನವರು ಬಿಜೆಪಿಯವರನ್ನು ಅವಾಚ್ಯವಾಗಿ ಮಾತನಾಡುವ ಮೂಲಕ ಹೀಯಾಳಿಸುತಿದ್ದಾರೆ. ಅದೇ ರೀತಿ ಬಿಜಡಪಿಯವರು ಕಾಂಗ್ರೆಸ್ನವರನ್ನು ಕಾಲೆಳೆಯುವುದು ದಿನದಿಂದ ದಿನಕ್ಕೆ ನಡೆಯುತ್ತಿರುತ್ತದೆ ವಿರೋಧ ಪಕ್ಷದವರನ್ನು ಪ್ರಾಣಿಗಳಿಗೆ ಹೋಲಿಸುವುದು ಮತ್ಯಅವುದೋ ವಸ್ತುಗಳೊಂದಿಗೆ ಹೋಲಿಸಿ ವ್ಯಂಗ್ಯ ಮಾಡುವುದು ದಿನವೂ ನಡೆಯುತ್ತಿರುತ್ತದೆ.ಅದೇ ರೀತಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುಜ್ರೆವಾಲ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮಹಾಭಾರತದ ಶಕುನಿಗೆ ಹೋಲಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಈ ಸರ್ಕಾರ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಎಂದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಟೀಕಿಸಿದ್ದಾರೆ.
ರಂದೀಪ್ ಸುರ್ಜೆವಾಲಾ, ಬಸವರಾಜ ಬೊಮ್ಮಾಯಿಯವರು ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು 90 ದಿನಗಳಲ್ಲಿ 3 ಬಾರಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿ ಮೊದಲು. ರಾಜ್ಯವನ್ನು ಲೂಟಿ ಮಾಡ್ತಿದ್ದಾರೆ ಅದು 40% ಕಮಿಷನ್ ವಿಚಾರದಲ್ಲಿ ಗೊತ್ತಾಗಿದೆ. ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಇದು ಎಂದರು.
ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಮನ್ಮ್ಯಾನ್, ಸಿಂಪಲ್ಮ್ಯಾನ್. ಯಾರೂ ಕೂಡಾ ಅವರ ಬದ್ಧತೆ ಬಗ್ಗೆ ಒಂದೂ ಪ್ರಶ್ನೆಯನ್ನೂ ಎತ್ತಲು ಅವಕಾಶವಿಲ್ಲದ ವ್ಯಕ್ತಿ, ಕಾಂಗ್ರೆಸ್ ನಾಯಕರ ಇಂತಹ ಅವಹೇಳನಕಾರಿ ಹೇಳಿಕೆ ಕಾಂಗ್ರೆಸ್ನ ವರ್ತನೆ ತೋರಿಸುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಕೂಡ ಇದೇ ರೀತಿ ಮಾತನಾಡುತ್ತಾರೆ. ಡಿಕೆ ಶಿವಕುಮಾರ್ ಕೂಡ ಅದೇ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಎಸ್ಟಿ ಸಮುದಾಯದ ಹಿರಿಯ ನಾಯಕರಾಗಿರುವ ಸಚಿವ ಶ್ರೀರಾಮುಲುಗೆ ಸಿದ್ದರಾಮಯ್ಯ ಪೆದ್ದ ಎಂದು ಹೇಳಿದ್ದರು. ಈಗ ಬೊಮ್ಮಾಯಿಗೆ ಅಪಮಾನ ಮಾಡುತ್ತಿದ್ದಾರೆ. ಒಬ್ಬ ಮುಖ್ಯಮಂತ್ರಿಗೆ ನೀಡುವ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡಿದ ಅಪಮಾನವಾಗಿದೆ. ಹೀಗಾಗಿ ರಾಜ್ಯದ ಜನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು.