ರಾಜಕೀಯ ಸುದ್ದಿ:
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬಿಜೆಪಿಯ ಸಚಿವರು ಮತ್ತು ಶಾಸಕರು ಕಾಂಗ್ರೆಸ್ ಸೇರಿಕೊಳ್ಳುತ್ತಾರೆ ಎಂಬ ಮಾತಿಗೆ ಮರು ನುಡಿದ ಸಚಿವ ಡಾ ಸುಧಾಕರ್ ಅವರು ಬಿಜೆಪಿಯಿಂದ ಯಾರು ಕಾಂಗ್ರೆಸ್ ಗೆ ಸೇರಿಕೊಳ್ಳುತ್ತಾರೆಂದು ಡಿಕೆ ಶಿವಕುಮಾರ್ ಅವರನ್ನೇ ಕೇಳಿ. ಅದಿರಲಿ ಕಾಂಗ್ರೆಸ್ನಲ್ಲಿ ಯಾವುದು ಚಟುವಟಿಕೆಗಳು ನಡೆಯುತ್ತಿಲ್ಲ ಹಾಗಿದ್ದರೆ ಯಾರು ತಾನೆ ಸೇರಿಕೊಳ್ಳುತ್ತಾರೆ ಹೇಳಿ ಈಗಾಗಲೆ ಕಾಂಗ್ರೆಸ್ ಎರಡನೆ ಪಟ್ಟಿ ಬಿಡುಗಡೆ ಮಾಡಲು ತೊಂದರೆಪಡುತ್ತಿದೆ. ಕಾಂಗ್ರೆಸ್ ನಲ್ಲಿ ನಾಯಕರ ದೊಡ್ಡ ಪಟ್ಟಿಯೇ ಇದೆ ಹಾಗಾಗಿ ಕುರ್ಚಿಗಾಗಿ ಆಗಾಗ ಜಗಳಗಳು ಆಗುತ್ತಿರುತ್ತವೆ. ಈಗಾಗಲೆ ಎಷ್ಟು ಕುರ್ಚಿಗಳು ಮುರಿದಿದೆಯೋ ಅವರಿಗೆ ಕೇಳಿ ಎಂದು ವ್ಯಂಗ್ಯ ಮಾಡಿದರು.
ಹಾಗೂ ಈ ಬಾರಿ ಬೊಮ್ಮಾಯಿಯವರು ಶಿಗ್ಗಾವಿ ಬಿಟ್ಟು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಡಿಕೆಶಿಯವರ ಮಾತಿಗೆ ಡಾ ಕೆ ಸುಧಾಕರ್ ಅವರು ಬೊಮ್ಮಾಯಿಯವರು ಕ್ಷೇತ್ರ ಸಂಕಟ ಎಂದು ಯಾರಿಗಾದರೂ ಹೇಳಿದ್ದಾರಾ, ಇವೆಲ್ಲ ಮಾಧ್ಯಮ ಸೃಷ್ಟಿ ಅಷ್ಟೆ. ಅವರು ಶಿಗ್ಗಾವಿಯಲ್ಲಿ ನಿಂತರೂ ಬಹುಮತದಿಂದ ಗೆಲುವನ್ನು ಸಾಧಿಸುತ್ತಾರೆ.ಬೊಮ್ಮಾಯಿಯವರು ಎಲ್ಲೂ ಸೋತಿಲ್ಲ . ಇವರು ವಿರುದ್ದ ನಿಂತರೆ ವಿನಯ್ ಕುಲಕರ್ಣಿಗೆ ಅಧಿಕ ಮತಗಳ ಅಂತರದಿಂದ ಸೋಲನ್ನುಅನುಭವಿಸುತ್ತಾರೆ ಎಂದರು.