ನವದೆಹಲಿ: ಕಾಂಗ್ರೆಸ್ ನಿಂದ ಪಕ್ಷಕ್ಕೆ ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ ಕೆಲವು ದಿನಗಳ ನಂತರ, ಪ್ರಶಾಂತ್ ಕಿಶೋರ್ ಸೋಮವಾರ ತಮ್ಮ ಮುಂದಿನ ಹುದ್ದೆಯ ಬಗ್ಗೆ ಸುಳಿವು ನೀಡಿದ್ದಾರೆ. ಅದೇ ಹೊಸ ರಾಜಕೀಯ ಪಕ್ಷದ ಮೂಲಕ ಸಕ್ರೀಯ ರಾಜಕಾರಣಕ್ಕೆ ಇಳಿಯುವಂತ ಸುಳಿವಾಗಿದೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, “ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗಿದಾರನಾಗಲು ಮತ್ತು ಜನಪರ ನೀತಿಯನ್ನು ರೂಪಿಸಲು ಸಹಾಯ ಮಾಡುವ ನನ್ನ ಅನ್ವೇಷಣೆಯು 10 ವರ್ಷಗಳ ರೋಲರ್ಕೋಸ್ಟರ್ ಸವಾರಿಗೆ ಕಾರಣವಾಯಿತು.ನಾನು ಪುಟವನ್ನು ತಿರುಗಿಸುತ್ತಿದ್ದಂತೆ, ಸಮಸ್ಯೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಜನರ ಉತ್ತಮ ಆಡಳಿತವಾದ “ಜನ ಸೂರಜ್” ನ ಹಾದಿಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ರಿಯಲ್ ಮಾಸ್ಟರ್ಸ್, ದಿ ಪೀಪಲ್ ಬಳಿಗೆ ಹೋಗುವ ಸಮಯ ಎಂದು ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ದೇಶವು ಕಂಡ ಅತ್ಯಂತ ಅಸಾಧಾರಣ ಚುನಾವಣಾ ವಿಜಯಗಳ ಹಿಂದೆ ಇರುವ 45 ವರ್ಷದ ತಂತ್ರಗಾರ ಕಾಂಗ್ರೆಸ್ ಗೆ ಸೇರುವುದಿಲ್ಲ ಎಂದು ಹೇಳಿದಾಗ ಕಾಂಗ್ರೆಸ್ ಗೆ ಕಳೆದ ವಾರ ಶಾಕ್ ಆಗಿತ್ತು. ಇದೀಗ ಹೊಸ ಪಕ್ಷ ಕಟ್ಟೋ ನಿರ್ಧಾರವನ್ನು ಹೊರ ಹಾಕಿದ್ದು, ಮತ್ತೊಂದು ಬಿಗ್ ಶಾಕ್ ನೀಡಿದಂತೆ ಆಗಿದೆ.



